IPL 2024: ಗಾಯಕ್ವಾಡ ಅರ್ಧಶತಕ - ಕೋಲ್ಕತ್ತಾ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದ ಚೆನ್ನೈ

IPL 2024: ಗಾಯಕ್ವಾಡ ಅರ್ಧಶತಕ - ಕೋಲ್ಕತ್ತಾ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದ ಚೆನ್ನೈ

ಚೆನ್ನೈ: ನಾಯಕ ಋತುರಾಜ್ ಗಾಯಕ್ವಾಡ್, ಡೇರಿಲ್ ಮಿಚೆಲ್ ಹಾಗೂ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ... ರನ್‌ ಗಳಿಂದ ಗೆಲುವು ಸಾಧಿಸಿದೆ. 

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ನ 2024 ಟೂರ್ನಿಯ 22ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಋತುರಾಜ್ ಗಾಯಕ್ವಾಡ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡವು 9 ವಿಕೆಟ್‌ ನಷ್ಟಕ್ಕೆ 137 ರನ್‌ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 14 ಎಸೆತಗಳು ಬಾಕಿ ಇರುವಂತೆ 3 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿ ಗೆದ್ದು ಬೀಗಿದೆ. 

ಚೆನ್ನೈ ಪರ ನಾಯಕ ಋತುರಾಜ್ ಗಾಯಕ್ವಾಡ್ 67 ರನ್ (58 ಎಸೆತ), ಡೇರಿಲ್ ಮಿಚೆಲ್ 25 ರನ್‌ (19 ಎಸೆತ), ಶಿವಂ ದುಬೆ 28 ರನ್‌ (18 ಎಸೆತ) ಹಾಗೂ ರಚಿನ್ ರವೀಂದ್ರ 15 ರನ್‌ ಗಳಿಸಿದರು. 

ಇದಕ್ಕೂ ಮುನ್ನ ಕೋಲ್ಕತ್ತಾ ಪರ ನಾಯಕ ಶ್ರೇಯಸ್ ಅಯ್ಯರ್ 34 ರನ್, ಸುನಿಲ್ ನರೈನ್ 27 ರನ್‌ ಹಾಗೂ ಆಂಗ್ಕ್ರಿಶ್ ರಘುವಂಶಿ 24 ರನ್‌, ಆಂಡ್ರೆ ರಸೆಲ್ 10 ರನ್‌ ಗಳಿಸಿದ್ದರು. ಇನ್ನು ಚೆನ್ನೈ ಪರ ತುಷಾರ್ ದೇಶಪಾಂಡೆ, ರವೀಂದ್ರ ಜಡೇಜಾ ತಲಾ 3 ವಿಕೆಟ್‌ ಪಡೆದುಕೊಂಡರೆ, ಮುಸ್ತಫಿಜುರ್ ರೆಹಮಾನ್ 2 ವಿಕೆಟ್‌, ಮಹೇಶ್ ತೀಕ್ಷಣ 1 ವಿಕೆಟ್‌ ಉರುಳಿಸಿದ್ದರು.