IPL 2022: ಅಹಮದಾಬಾದ್ ಫ್ರಾಂಚೈಸಿ ತಂಡಕ್ಕೆ 'ಗುಜರಾತ್ ಟೈಟಾನ್ಸ್' ಎಂದು ನಾಮಕರಣ

IPL 2022: ಅಹಮದಾಬಾದ್ ಫ್ರಾಂಚೈಸಿ ತಂಡಕ್ಕೆ 'ಗುಜರಾತ್ ಟೈಟಾನ್ಸ್' ಎಂದು ನಾಮಕರಣ

ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ಹೊಸದಾಗಿ ಸೇರ್ಪಡೆಯಾಗಿರುವ ಅಹಮದಾಬಾದ್ ಫ್ರಾಂಚೈಸಿಯು ತನ್ನ ತಂಡದ ಹೆಸರನ್ನು ಪ್ರಕಟಿಸಿದೆ. ಹೊಸ ತಂಡದ ಹೆಸರು 'ಗುಜರಾತ್ ಟೈಟಾನ್ಸ್' ಎಂದು ಫ್ರಾಂಚೈಸಿ ಘೋಷಿಸಲಾಗಿದೆ. ಗುಜರಾತ್ ಟೈಟಾನ್ಸ್ ತಂಡವನ್ನು ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಐಪಿಎಲ್ ಟೂರ್ನಿಯ ವೇಳಾಪಟ್ಟಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಮಾರ್ಚ್ ಅಂತ್ಯದಲ್ಲಿ ಟೂರ್ನಿ ಆರಂಭವಾಗುವ ನಿರೀಕ್ಷೆ ಇದೆ. ಅಹಮದಾಬಾದ್ ಹಾಗೂ ಲಖನೌ ಫ್ರಾಂಚೈಸಿಗಳ ಸೇರ್ಪಡೆಯೊಂದಿಗೆ ಈ ಬಾರಿ ಒಟ್ಟು 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಲಕ್ನೋ ಫ್ರಾಂಚೈಸಿಯ ತಂಡದ ಹೆಸರು ಇನ್ನಷ್ಟೇ ಘೋಷಣೆಯಾಗಬೇಕಿದೆ.