IND vs WI 2nd ODI: ಕನ್ನಡಿಗನ ಬೌಲಿಂಗ್ ದಾಳಿಗೆ ವಿಂಡೀಸ್ ತತ್ತ- ಸರಣಿ ಭಾರತದ ವಶ

IND vs WI 2nd ODI: ಕನ್ನಡಿಗನ ಬೌಲಿಂಗ್ ದಾಳಿಗೆ ವಿಂಡೀಸ್ ತತ್ತ- ಸರಣಿ ಭಾರತದ ವಶ

ಅಹಮದಾಬಾದ್: ಕನ್ನಡಿಗ ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್‌ ಇಂಡೀಸ್ ತಂಡವು ಭಾರತದ ವಿರುದ್ಧ 44 ರನ್‌ಗಳಿಂದ ಸೋಲು ಒಪ್ಪಿಕೊಂಡಿದೆ. ಈ ಮೂಲಕ ಮೂರು ಭಾರತವು ೨-೦ ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಟಾಸ್​ ಗೆದ್ದು ವೆಸ್ಟ್​ ಇಂಡೀಸ್​ ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 238 ರನ್‌ಗಳ ಗುರಿ ನೀಡಿತ್ತು. ಈ ಟಾರ್ಗೆಟ್ ಬೆನ್ನತ್ತಿದ ವಿಂಡೀಸ್ ತಂಡವು 46 ಓವರ್‌ಗಳಲ್ಲಿ ಎಲ್ಲ 10 ವಿಕೆಟ್ ಕಳೆದುಕೊಂಡು 193 ರನ್‌ ಗಳಿಸಲು ಶಕ್ತವಾಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ 9 ಓವರ್‌ ಬೌಲಿಂಗ್‌ ಮಾಡಿ 12 ರನ್‌ ನೀಡಿದ (3 ಓವರ್‌ ಮೆಡನ್) 4 ವಿಕೆಟ್ ಉರುಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಇನ್ನು ಶಾರ್ದೂಲ್ ಠಾಕೂರ್ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಶಿರಾಜ್, ದೀಪಕ್ ಹೂಡಾ, ಯಜುವೇಂದ್ರ ಚಾಹಲ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದುಕೊಂಡು ತಂಡಕ್ಕೆ ಆಸರೆಯಾದರು. ಇದಕ್ಕೂ ಮುನ್ನ ಭಾರತದ ಪರ ಸೂರ್ಯಕಾಂತ್ ಯಾದವ್ 64 ರನ್, ಕೆ.ಎಲ್. ರಾಹುಲ್ 49 ರನ್, ದೀಪಕ್ ಹೂಡಾ 29 ರನ್ ಹಾಗೂ ವಾಷಿಂಗ್ಟನ್ ಸುಂದರ್ 24 ರನ್ ಗಳಿಸಿದ್ದರು.