ತುರ್ತು ಪರಿಸ್ಥಿತಿ ಘೋಷಣೆಗೆ 50 ವರ್ಷ : ಪ್ರತಿಭಟನೆಯಲ್ಲಿ ಜೋಶಿ ಭಾಗಿ

ದೆಹಲಿ : 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿದ್ದು, ಸಂಸತ್ತಿನ ಆವರಣದಲ್ಲಿ ಬಿಜೆಪಿ ನಾಯಕರು ತುರ್ತು ಪರಿಸ್ಥಿತಿಯ ಭೀಕರತೆಯ ವಿರುದ್ಧ ಪ್ರತಿಭಟನೆ ನಡೆಸಿದರು.
1975 ರಲ್ಲಿ ಭಾರತವನ್ನು 21 ತಿಂಗಳ ಅವಧಿ ತುರ್ತು ಪರಿಸ್ಥಿತಿಗೆ ದೂಕಿದ್ದು ನಿಜವಾಗಿಯೂ ಕರಾಳ ಅವಧಿ ಹಾಗೂ ಪ್ರಜಾಪ್ರಭುತ್ವದ ಮೂಲತತ್ವವನ್ನೇ ಹತ್ತಿಕ್ಕಲಾಗಿತ್ತು. ಎನ್ನುವ ವಿಚಾರವನ್ನು ಮತ್ತೆ ನೆನಪಿಸಿಕೊಳ್ಳಲಾಗಿದೆ.
ಹೌದು ಜೂನ್ 25ರಂದು ತುರ್ತು ಪರಿಸ್ಥಿತಿಯ ಘೋಷಣೆಗೆ 50 ವರ್ಷಗಳಾಗಿವೆ ಈ ಅವಧಿ ಭಾರತದ ಪ್ರಜಾಪ್ರಭುತ್ವದ ಇತಿಹಾಸದ 'ಕರಾಳ ಅಧ್ಯಾಯ' ಎಂದು ಬಿಜೆಪಿಗರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ತುರ್ತು ಪರಿಸ್ಥಿತಿಯ ಭೀಕರತೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸಂಸದ ಪ್ರಹ್ಲಾದ್ ಜೋಶಿಯವರು ಭಾಗವಹಿಸಿದ್ದರು.
ಈ ಮೂಲಕ ಅವರು 1975ರಲ್ಲಿ ಐತಿಹಾಸಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದನ್ನು ಈಗ ಹಿಂತಿರುಗಿ ನೋಡಿದಾಗ, ತುರ್ತು ಪರಿಸ್ಥಿತಿಯನ್ನು ಸ್ವಾತಂತ್ರ್ಯಾ ನಂತರ ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ಅವಧಿ ಎನ್ನಲಾಗಿದೆ.