IPL 2025: ಹೆಡ್ ಫಿಫ್ಟಿ ಮಿಸ್‌, ಅನಿಕೇತ್, ರೆಡ್ಡಿ ಅಬ್ಬರ - ಲಕ್ನೋಗೆ 191 ರನ್‌ಗಳ ಗುರಿ ನೀಡಿದ ಹೈದರಾಬಾದ್

IPL 2025: ಹೆಡ್ ಫಿಫ್ಟಿ ಮಿಸ್‌, ಅನಿಕೇತ್, ರೆಡ್ಡಿ ಅಬ್ಬರ - ಲಕ್ನೋಗೆ 191 ರನ್‌ಗಳ ಗುರಿ ನೀಡಿದ ಹೈದರಾಬಾದ್

ಹೈದರಾಬಾದ್‌: ಟ್ರಾವಿಸ್ ಹೆಡ್, ಅನಿಕೇತ್ ವರ್ಮಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅಬ್ಬರರ ಬ್ಯಾಟಿಂಗ್ ಸಹಾಯದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ಗೆ 191 ರನ್‌ಗಳ ಗುರಿ ನೀಡಿದೆ. 

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಐಪಿಎಲ್ 2025ರ ಭಾಗವಾಗಿ ನಡೆಯುತ್ತಿರುವ 7ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು 9 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿದೆ. ತಂಡದ ಪರ ಟ್ರಾವಿಸ್ ಹೆಡ್ 47 ರನ್, ಅನಿಕೇತ್ ವರ್ಮಾ 36 ರನ್, ನಿತೀಶ್ ಕುಮಾರ್ ರೆಡ್ಡಿ 32 ರನ್ ಹಾಗೂ ಹೆನ್ರಿಕ್ ಕ್ಲಾಸೆನ್ 26 ರನ್‌ ಗಳಿಸಿದರು.