ಹುಬ್ಬಳ್ಳಿ: ನವೀಕೃತ ಜನತಾ ಬಜಾರ್ ಲೋಕಾರ್ಪಣೆ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಅಡಿ ಹುಬ್ಬಳ್ಳಿಯಲ್ಲಿ 18.50 ಕೋಟಿ ವೆಚ್ಚದಡಿ ನವೀಕರಣಗೊಂಡ ಜನತಾ ಬಜಾರ್ ಮಾರುಕಟ್ಟೆಯನ್ನು ಇಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಜೋಶಿ, ಹುಬ್ಬಳ್ಳಿಯ ಅತಿ ಹೆಚ್ಚು ವ್ಯಾಪಾರಗಳು ಈ ಜನತಾ ಬಜಾರ್‌ನಲ್ಲಿ ಆಗುತ್ತಿವೆ. ಇದನ್ನು ನವೀಕರಿಸಿದ್ದು ಹುಬ್ಬಳ್ಳಿಯ ಜನತೆಗೆ ತುಂಬಾ ಉಪಯುಕ್ತವಾಗಿದೆ. ಇಂದಿನಿಂದ ಈ ಬಜಾರ್ ಬಳಕೆಗೆ ಮುಕ್ತವಾಗಿದ್ದು, ಜನರು ಮೊದಲಿನಂತೆ ಇಲ್ಲಿ ವ್ಯಾಪಾರ ವ್ಯವಹಾರಗಳನ್ನು ಮಾಡಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಸಚಿವ ಹಾಲಪ್ಪ ಆಚಾರ್, ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆಯ ಸದಸ್ಯರು, ಸ್ಮಾರ್ಟ್ ಸಿಟಿ ಸದಸ್ಯರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.