ಹುಬ್ಬಳ್ಳಿ: ಉಗ್ರ ಸ್ವರೂಪ ಪಡೆದ ವಿದ್ಯಾರ್ಥಿಗಳ ಪ್ರತಿಭಟನೆ: ಬ್ಯಾರಿಕೇಡ್ ಹಾಗೂ ಗೇಟ್ ತಳ್ಳಿ ಮುತ್ತಿಗೆಗೆ ಯತ್ನ

ಹುಬ್ಬಳ್ಳಿ: ಉಗ್ರ ಸ್ವರೂಪ ಪಡೆದ ವಿದ್ಯಾರ್ಥಿಗಳ ಪ್ರತಿಭಟನೆ: ಬ್ಯಾರಿಕೇಡ್ ಹಾಗೂ ಗೇಟ್ ತಳ್ಳಿ ಮುತ್ತಿಗೆಗೆ ಯತ್ನ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ನವನಗರದ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಬ್ಯಾರಿಕೇಡ್ ಹಾಗೂ ವಿಶ್ವವಿದ್ಯಾಲಯ ಗೇಟ್ ತಳ್ಳಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕುವ ವೇಳೆಯಲ್ಲಿ ಪೊಲೀಸರ ಹಾಗೂ ವಿದ್ಯಾರ್ಥಿಗಳ ಮಧ್ಯದಲ್ಲಿ ತಳ್ಳಾಟ ನಡೆದಿದೆ. ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದು, ಕಾನೂನು ವಿವಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ವಿರೋಧ ಒಡ್ಡಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಬ್ಯಾರಿಕೇಡ್ ಹಾಗೂ ಗೇಟ್ ಗಳನ್ನು ತಳ್ಳಿ ಒಳಗೆ ನುಗ್ಗಲು ಮುಂದಾಗಿದ್ದು, ಈ ನಡುವೆ ಪೊಲೀಸರ ಹಾಗೂ ವಿದ್ಯಾರ್ಥಿಗಳ ನಡುವೆ ತಳ್ಳಾಟ ನೂಕಾಟ ಹೆಚ್ಚಾಯಿತು. ಇನ್ನೂ ವಿದ್ಯಾರ್ಥಿಗಳನ್ನ ತಡೆಯಲು ಪೊಲೀಸರ ಹರಸಾಹಸ ಪಡುವಂತಾಯಿತು. ಅಲ್ಲದೇ ಕೂಡಲೇ ಬೇಡಿಕೆ ಈಡೇರಿಸುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.