ಹುಬ್ಬಳ್ಳಿ : ಪಾದಾಚಾರಿಗೆ ಗುದ್ದಿದ ಬಿಆರ್ ಟಿಎಸ್ ಬಸ್! ವ್ಯಕ್ತಿಯ ಸ್ಥಿತಿ ಗಂಭೀರ

ಹುಬ್ಬಳ್ಳಿ : ಪಾದಾಚಾರಿಗೆ ಗುದ್ದಿದ ಬಿಆರ್ ಟಿಎಸ್ ಬಸ್! ವ್ಯಕ್ತಿಯ ಸ್ಥಿತಿ ಗಂಭೀರ

ಹುಬ್ಬಳ್ಳಿ : ಬಿಆರ್ ಟಿಎಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ, ಪಾದಾಚಾರಿಯೋರ್ವನು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ಪಾದಚಾರಿ ರಸ್ತೆ ದಾಟುತ್ತಿದ್ದಾಗ ಬಿಆರ್ ಟಿಎಸ್ ಬಸ್ ಗುದ್ದಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವ್ಯಕ್ತಿ ಹೆಸರು ತಿಳಿದು ಬಂದಿಲ್ಲ. ಸದ್ಯ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸ್ ರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೇಶ್ವಾಪೂರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.