ಹಿಮಾಚಲ ಪ್ರದೇಶ: ಬಿಜೆಪಿಗೆ ಅಡ್ಡ ಮತದಾನ - 6 ಕಾಂಗ್ರೆಸ್ ಶಾಸಕರಿಗೆ ತಲೆ ದಂಡ.!

ಹಿಮಾಚಲ ಪ್ರದೇಶ: ಬಿಜೆಪಿಗೆ ಅಡ್ಡ ಮತದಾನ - 6 ಕಾಂಗ್ರೆಸ್ ಶಾಸಕರಿಗೆ ತಲೆ ದಂಡ.!

ಶಿಮ್ಲಾ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್ ಶಾಸಕರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್ ಇಂದು ಘೋಷಿಸಿದ್ದಾರೆ. 

ಆರು ಶಾಸಕರೆಂದರೆ ರಾಜಿಂದರ್ ರಾಣಾ, ಸುಧೀರ್ ಶರ್ಮಾ, ಇಂದರ್ ದತ್ ಲಖನ್‌ಪಾಲ್, ರವಿ ಠಾಕೂರ್, ಚೈತನ್ಯ ಶರ್ಮಾ ಮತ್ತು ದೇವಿಂದರ್ ಭುಟ್ಟೊ. ಕಾಂಗ್ರೆಸ್ ರೆಬಲ್ಸ್‌ ವಿರುದ್ಧ ಅನರ್ಹತೆ ನಿರ್ಣಯ ಮಂಡಿಸಿತ್ತು. 

ಬಿಜೆಪಿ ಆಡಳಿತವಿರುವ ಹರಿಯಾಣದಲ್ಲಿ ಹಿಂದಿನ ರಾತ್ರಿ ತಂಗಿದ್ದ ಆರು ಶಾಸಕರು ನಿನ್ನೆ ವಿಧಾನಸಭೆಗೆ ಬಂದಾಗ ಅವರ 'ಶೌರ್ಯ'ಕ್ಕೆ ಬಿಜೆಪಿ ಚಪ್ಪಾಳೆ ತಟ್ಟಿ ಅಭಿನಂದಿಸಿತ್ತು. 

ನಿನ್ನೆ ಸದನದಲ್ಲಿ ಹಣಕಾಸು ಮಸೂದೆಗೆ ಸರ್ಕಾರದ ಪರವಾಗಿ ಮತ ಚಲಾಯಿಸಲು ಪಕ್ಷದ ವಿಪ್ ಅನ್ನು ಧಿಕ್ಕರಿಸಿದ ಕಾರಣಕ್ಕಾಗಿ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಇಂದು ಹೇಳಿದ್ದಾರೆ.