ಮುಂಬೈ ಇಂಡಿಯನ್ಸ್ ನಾಯಕನಾಗಿ ಹಾರ್ದಿಕ್ ಪಾಂಡ್ಯ ನೇಮಕ - ರೋಹಿತ್ 10 ವರ್ಷಗಳ ಆಳ್ವಿಕೆ ಅಂತ್ಯ

ಮುಂಬೈ ಇಂಡಿಯನ್ಸ್ ನಾಯಕನಾಗಿ ಹಾರ್ದಿಕ್ ಪಾಂಡ್ಯ ನೇಮಕ - ರೋಹಿತ್ 10 ವರ್ಷಗಳ ಆಳ್ವಿಕೆ ಅಂತ್ಯ

ಮುಂಬೈ: ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024ರ ಋತುವಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಿದೆ. 10 ವರ್ಷಗಳ ಕಾಲ ನಾಯಕನಾಗಿ ತಂಡವನ್ನು ಮುನ್ನೆಡೆಸಿದ್ದ ರೋಹಿತ್ ಶರ್ಮಾ ಅವರ ಬಳಿಕ ಜವಾಬ್ದಾರಿಯನ್ನು ಪಾಂಡ್ಯ ಅವರ ಹೆಗಲಿಗೆ ನೀಡಲಾಗಿದೆ. 

ಹೌದು. ಮುಂಬೈ ಇಂಡಿಯನ್ಸ್ (MI) ಐಪಿಎಲ್ 2024ಕ್ಕೆ ಮುಂಚಿತವಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಫ್ರಾಂಚೈಸಿಯ ನಾಯಕನಾಗಿ 10 ವರ್ಷಗಳ ಅವಧಿಯನ್ನು ಹೊಂದಿದ್ದ ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಬದಲಾಯಿಸಿದ್ದಾರೆ. 2022ರಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ತಂಡವನ್ನು ಐಪಿಎಲ್ ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ್ದ ಹಾರ್ದಿಕ್, ಕಳೆದ ತಿಂಗಳು ಎರಡು ವರ್ಷಗಳ ನಂತರ ಎಂಐಗೆ ಮರಳಿದ್ದಾರೆ.