ಐಐಟಿ-ಬಾಂಬೆಗೆ 315 ಕೋಟಿ ರೂ ದೇಣಿಗೆ ನೀಡಿದ ಇನ್ಫೋಸಿಸ್‌ ಸಹ ಸಂಸ್ಥಾಪಕ

ಐಐಟಿ-ಬಾಂಬೆಗೆ 315 ಕೋಟಿ ರೂ ದೇಣಿಗೆ ನೀಡಿದ ಇನ್ಫೋಸಿಸ್‌ ಸಹ ಸಂಸ್ಥಾಪಕ

ಮುಂಬೈ: ಇನ್ಫೋಸಿಸ್ ಲಿಮಿಟೆಡ್‌ನ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷರಾದ ನಂದನ್ ನಿಲೇಕಣಿ ಅವರು ತಾವು ಶಿಕ್ಷಣ ಪಡೆದ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಬಾಂಬೆಗೆ 315 ಕೋಟಿ ರೂಪಾಯಿ (38.5 ಮಿಲಿಯನ್ ಅಮೆರಿಕನ್ ಡಾಲರ್‌) ದೇಣಿಗೆ ನೀಡಿದ್ದಾರೆ. ಈ ಮೂಲಕ ಐಐಟಿ-ಬಾಂಬೆಗೆ ಅವರ ಒಟ್ಟು ಕೊಡುಗೆ 400 ಕೋಟಿ ರೂಪಾಯಿಗೆ ತಲುಪಿದೆ. 

ನಂದನ್ ನಿಲೇಕಣಿ ಅವರು ಐಐಟಿ-ಬಾಂಬೆಯಲ್ಲಿ 1973 ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಐಐಟಿ ಸಂಸ್ಥೆಯೊಂದಿಗೆ 50 ವರ್ಷಗಳ ಒಡನಾಟವನ್ನು ಇಟ್ಟುಕೊಂಡಿರುವ ಕಾರಣ ಇಷ್ಟು ದೊಡ್ಡ ಹಣವನ್ನು ನಂದನ್ ನಿಲೇಕಣಿ ದೇಣಿಗೆ ನೀಡಿದ್ದಾರೆ. 

ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಐಐಟಿ ಬಾಂಬೆಯ ದೃಷ್ಟಿಕೋನವನ್ನು ಬೆಂಬಲಿಸುವ ಗುರಿಯನ್ನು ಈ ಕೊಡುಗೆ ಹೊಂದಿದೆ.