ಬೆಳಗಾವಿ: ಸವದಿ ಸೇರಿದಂತೆ ಯಾರು ಪಕ್ಷ ಬಿಡುವುದಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ಲಕ್ಷ್ಮಣ ಸವದಿ ಬಿಜೆಪಿಗೆ ಸೇರ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಸವದಿ ಸೇರಿದಂತೆ ಯಾರು ಪಕ್ಷ ಬಿಡುವುದಿಲ್ಲ, ಅವರು ಶಾಸಕರಿದ್ದಾರೆ. ಕಾಂಗ್ರೆಸ್ ಬಿಟ್ಟು ಅವರು ಎಲ್ಲಿಯೂ ಹೋಗುವುದಿಲ್ಲ ನಮ್ಮ ಪಕ್ಷದ ಪರವಾಗಿ ಸವದಿ ಇದ್ದಾರೆ ಜಗದೀಶ್ ಶೆಟ್ಟರ್ ಕೇಸ್ ಬೇರೆ, ಸವದಿ ಅವರ ಕೇಸ್ ಬೇರೆ. ಒಂದೊಂದು ಕೇಸ್ ಹೋಲಿಸಲು ಆಗುವುದಿಲ್ಲ ಬೇರೆ ಬೇರೆ ಇರುತ್ತದೆ. ಡಾಕ್ಟರ್ ಬಳಿ ಒಬ್ಬೊಬ್ಬರದ್ದು ಕೇಸ್ ಪೇಪರ್ ಬೇರೆ ಬೇರೆ ಇರುತ್ತವೆ ಎಂದರು.
ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಸ್ಥಾನದ ಆಫರ್ ನೀಡಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ, ಇನ್ನು ಟೈಮ್ ಇದೆ, ಒಳ್ಳೆಯವರಿಗೆ ಅವಕಾಶ ಇದೆ. ಸವದಿ ಅವರಿಗೆ ಸಾಮಾರ್ಥ್ಯ ಇದೆ, ಒಳ್ಳೆಯ ಕೆಲಸ ಮಾಡಿದ್ದಾರೆ. ಸಿಗುವಂತ ಅವಕಾಶಗಳು ಮುಂದಿನ ಕಾಲದಲ್ಲಿ ಇವೆ, ಇಲ್ಲಾ ಅಂತಾ ಹೇಳಲು ಆಗುವುದಿಲ್ಲ ಎಂದರು.