ಧಾರವಾಡ: ಗ್ರಾಪಂ ಸದಸ್ಯ ಸ್ಥಾನದ ಉಪ ಚುನಾವಣೆಗಳು ಮುಂದೂಡಿಕೆ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ, ಖಾಲಿಯಿರುವ ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ಜರುಗಿಸಲು ರಾಜ್ಯ ಚುನಾವಣೆ ಆಯೋಗವು ಆದೇಶಿಸಿ ವೇಳಾಪಟ್ಟಿಯೊಂದಿಗೆ ಸೂಚಿಸಿತ್ತು.
ಆದರೆ, ರಾಜ್ಯ ಚುನಾವಣೆ ಆಯೋಗವು ಈ ಗ್ರಾಮ ಪಂಚಾಯ್ತಿ ಉಪ ಚುನಾವಣೆಗಳನ್ನು 15 ದಿನಗಳ ಮಟ್ಟಿಗೆ ಮುಂದೂಡಿ ಇಂದು ಆದೇಶಿಸಿದೆ. ಕಾರಣ ಈ ಕುರಿತು ಉಪ ಚುನಾವಣೆಯನ್ನು ಜರುಗಿಸುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚುರಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.