10 ಗ್ರಾಂ ಚಿನ್ನದ ಬೆಲೆ ₹88,500 : ಬೆಳ್ಳಿ ದರವೂ ಹೆಚ್ಚಳ

10 ಗ್ರಾಂ ಚಿನ್ನದ ಬೆಲೆ ₹88,500 : ಬೆಳ್ಳಿ ದರವೂ ಹೆಚ್ಚಳ

ನವದೆಹಲಿ: ಸೋಮವಾರ ಚಿನಿವಾರ ಪೇಟೆಯಲ್ಲಿ ಬಂಗಾರದ ಬೆಲೆ ದಾಖಲೆ ನಿರ್ಮಿಸಿದೆ. ₹2,430 ಹೆಚ್ಚಳವಾಗುವ ಮೂಲಕ 10 ಗ್ರಾಂ ಶುದ್ಧ ಚಿನ್ನದ ದರ ₹88,500ಕ್ಕೆ ತಲುಪಿದೆ. 

ಚಿನ್ನದ ದರವು 10 ಗ್ರಾಂಗೆ (ಶೇ 99.9 ಪರಿಶುದ್ಧತೆ) ₹2,430 ಹೆಚ್ಚಳವಾಗಿ, ₹88,500ರಂತೆ ಮಾರಾಟವಾಗಿದೆ. ಸ್ಟ್ಯಾಂಡರ್ಡ್‌ ಚಿನ್ನದ (ಶೇ 99.5 ಪರಿಶುದ್ಧತೆ) ಬೆಲೆಯು ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿ, ₹88,100ಕ್ಕೆ ಮುಟ್ಟಿದೆ. ಇದು ಇದುವರೆಗಿನ ಸಾರ್ವಕಾಲಿಕ ಗರಿಷ್ಠ ಏರಿಕೆಯಾಗಿದೆ. 

ಬೆಳ್ಳಿ ಧಾರಣೆ ಕೆ.ಜಿಗೆ ₹1,000 ಹೆಚ್ಚಳವಾಗಿ, ₹97,500 ಆಗಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ತಿಳಿಸಿದೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕಕ್ಕೆ ಆಮದಾಗುವ ಸ್ಟೀಲ್ ಮತ್ತು ಅಲ್ಯಮಿನಿಯಂ ಮೇಲೆ ಶೇ 25ರಷ್ಟು ತೆರಿಗೆ ವಿಧಿಸುವುದಾಗಿ ಹೇಳಿಕೆ ನೀಡುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಲೋಹಗಳ ಬೆಲೆಯಲ್ಲಿ ಏರಿಕೆಯಾಗಿದೆ.