ಹುಬ್ಬಳ್ಳಿ :ನಾಳೆಯಿಂದ ಜಿಲ್ಲೆಯಲ್ಲಿ144 ಸೆಕ್ಷನ್ ಜಾರಿ:ಎನು ಇರುತ್ತೇ ಎನ ಇರಲ್ಲ ಇಲ್ಲಿದೆ ಮಾಹಿತಿ

ಹುಬ್ಬಳ್ಳಿ :ನಾಳೆಯಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಜಿಲ್ಲೆಯಾಧ್ಯಂತ ಸಿಆರ್ ಪಿ ಸಿ 144 ಸೆಕ್ಷೆನ್ ಜಾರಿ ಮಾಡಿ ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿಂದ ಜುಲೈ 24 ರ ರಾತ್ರಿ 8 ರವರೆಗೆ ನಿಷೇಧಾಜ್ಞೆ ಜಾರಿ ಮಾಡಿದ್ದು, ಹಣ್ಣು, ಹಾಲು, ತರಾಕರಿಗೆ ವಿನಾಯತಿ ನೀಡಿದ್ದು, ಔಷದಿ ಅಂಗಡಿ, ಆಸ್ಪತ್ರೆಗಳು ಎಂದಿನಂತೆ ಓಪನ್ ಇರಲಿವೆ.ಮಾಂಸ, ಮೊಟ್ಟೆ ಕೇಂದ್ರಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದು,ಹೋಟೆಲ್ ನಲ್ಲಿ ಪಾರ್ಸೆಲ್ ಗೆ ಮಾತ್ರ ಅನುಮತಿ ನೀಡಿದೆ.
ಸರ್ಕಾರಿ ವಾಹನ ಸೇರಿದಂತೆ ಖಾಸಗಿ ವಾಹನ ಓಡಾಟಕ್ಕೆ ನಿಷೇಧ ಹೇರಿದ್ದು,ಬಾರ್, ರೆಸ್ಟೋರೆಂಟ್, ಮಾಲ್ ಗಳು ಬಂದ್ ಆಗಲಿವೆ. ಕೃಷಿಯೇತರ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
ಕೃಷ್ಟಿ ಯಂತ್ರೋಪಕರಣ ಬಿಡಿ ಭಾಗಗಳ ಮಳಿಗೆಗಳಿಗೆ ಅವಕಾಶ ನೀಡಿದ್ದು,ಎಲ್ಲ ಪ್ರಾರ್ಥನಾ ಮಂದಿರಗಳನ್ನ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.