ಮನು ಭಾಕರ್, ಗುಕೇಶ್ ಸೇರಿ ನಾಲ್ವರು ಅಥ್ಲೀಟ್‌ಗಳಿಗೆ 'ಖೇಲ್ ರತ್ನ ಪ್ರಶಸ್ತಿ

ಮನು ಭಾಕರ್, ಗುಕೇಶ್ ಸೇರಿ ನಾಲ್ವರು ಅಥ್ಲೀಟ್‌ಗಳಿಗೆ 'ಖೇಲ್ ರತ್ನ ಪ್ರಶಸ್ತಿ

ನವದೆಹಲಿ: ಒಲಿಂಪಿಕ್‌ನಲ್ಲಿ ಜೋಡಿ ಪದಕ ಗೆದ್ದ ಮನು ಭಾಕರ್ ಹಾಗೂ ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಸೇರಿ ನಾಲ್ವರು ಅಥ್ಲೀಟ್‌ಗಳಿಗೆ ಪ್ರತಿಷ್ಟಿತ 'ಖೇಲ್ ರತ್ನ' ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವಾಲಯ ತಿಳಿಸಿದೆ. 

ಇನ್ನು ಇವ್ರ ಜೊತೆ ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್ ಅವರು ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. 

“ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ಸೂಕ್ತ ಪರಿಶೀಲನೆಯ ನಂತರ, ಈ ಕೆಳಗಿನ ಕ್ರೀಡಾಪಟುಗಳು, ತರಬೇತುದಾರರು, ವಿಶ್ವವಿದ್ಯಾಲಯ ಮತ್ತು ಸಂಸ್ಥೆಗೆ ಪ್ರಶಸ್ತಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ