ಬ್ಲ್ಯೂ ಟಿಕ್ ಟ್ವಿಟರ್ ಖಾತೆಗಳಿಗೆ ₹662 ತಿಂಗಳ ಶುಲ್ಕ ವಿಧಿಸಿದ ಎಲಾನ್ ಮಸ್ಕ್

ವಾಷಿಂಗ್ಟನ್: ಟ್ವಿಟರ್‌ನಲ್ಲಿ ಇನ್ಮುಂದೆ ಬ್ಲ್ಯೂ ಟಿಕ್ ಇರುವ ಖಾತೆದಾರರು ಶುಲ್ಕ ಪಾವತಿಸಬೇಕಿದೆ. ಟ್ವಿಟರ್ ಅಧಿಪತಿ ಎಲಾನ್ ಮಸ್ಕ್ ಅವರು ಈ ಹೊಸ ನಿಯಮ ತಂದಿದ್ದಾರೆ.
ಇದರ ಪ್ರಕಾರ ಟ್ವಿಟರ್‌ನಲ್ಲಿ ಬ್ಲ್ಯೂಟಿಕ್ ಹೊಂದಿದವರು ಖಾತೆಯನ್ನು ಮುಂದುವರೆಸಬೇಕಾದರೆ ತಿಂಗಳಿಗೆ 8 ಡಾಲರ್ ಅಂದರೆ ಅಂದಾಜು ₹662 ಪಾವತಿಸಬೇಕು. ಇದು ದೀರ್ಘ ವಿಡಿಯೋ ಹಾಗೂ ಆಡಿಯೋ ಪೋಸ್ಟ್ ಮಾಡುವವರಿಗೆ ಹಾಗೂ ಸ್ಕ್ಯಾಮ್ ಮತ್ತು ಸ್ಪ್ಯಾಮ್ ವಿರುದ್ಧ ಹೋರಾಡಲು ಅನುವು ಮಾಡಿಕೊಡುತ್ತದೆ. ಎಂಬುದು ಟ್ವಿಟರ್ ವಾಗ್ದಾನವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ಈ ಹೊಸ ನಿಯಮವು ಖಾತೆದಾರರಿಗೆ ತಮ್ಮ ಖಾತೆಗಳ ಮೇಲೆ ಸಂಪೂರ್ಣ ಅಧಿಕಾರ ನೀಡುತ್ತದೆ ಎಂದಿದ್ದಾರೆ.