ಬೆಳಗಾವಿ : ಅಧಿವೇಶನಕ್ಕೂ ಮುನ್ನ ಅಹವಾಲು ಸ್ವೀಕರಿಸಿದ ಸಿಎಂ - ವಿಶೇಷ ಚೇತನನಿಗೆ ನೆರವಾಗುವಂತೆ ಅಧಿಕಾರಿಗಳಿಗೆ ಸೂಚನೆ

ಬೆಳಗಾವಿ : ಅಧಿವೇಶನಕ್ಕೂ ಮುನ್ನ ಅಹವಾಲು ಸ್ವೀಕರಿಸಿದ ಸಿಎಂ - ವಿಶೇಷ ಚೇತನನಿಗೆ ನೆರವಾಗುವಂತೆ ಅಧಿಕಾರಿಗಳಿಗೆ ಸೂಚನೆ

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಸುವರ್ಣಸೌಧಕ್ಕೆ ತೆರಳುವ ಮುನ್ನ ತಾವು ತಂಗಿರುವ ಸರ್ಕೀಟ್ ಹೌಸ್ ನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ವಿಕಲಾಂಗ ಚೇತನ ವ್ಯಕ್ತಿಯೋರ್ವ ಸಿಎಂಗೆ ತನ್ನ ಸಮಸ್ಯೆಯನ್ನು ಹೇಳಿಕೊಂಡರು. ಈ ವೇಳೆ ಮುಖ್ಯಮಂತ್ರಿ, ವ್ಯಕ್ತಿಗೆ ಇಲಾಖೆಯ ವತಿಯಿಂದ ಸೂಕ್ತ ನೆರವು ಒದಗಿಸಬೇಕೆಂದು ಅಲ್ಲಿಯೇ ಹಾಜರಿದ್ದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.