ಧಾರವಾಡ: ವಿದ್ಯಾರ್ಥಿಗಳ ಚಿತ್ತ 24/7 ಲೈಬ್ರರಿಗಳತ್ತ

ಧಾರವಾಡ: ವಿದ್ಯಾಕಾಶಿ ಎಂದೇ ಪ್ರಸಿದ್ಧ. ಧಾರವಾಡದಲ್ಲಿ ಶೈಕ್ಷಣಿಕ ಜೀವನ ಮುಗಿಸಿ ತಮ್ಮ ಜೀವನ ರೂಪಿಸಿಕೊಂಡವರು ಅದೆಷ್ಟೋ ಜನ. ವಿದ್ಯಾರ್ಜನೆಯ ಮೂಲ ಆಗರವೇ ಧಾರವಾಡವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಧಾರವಾಡ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಾ ಸಾಗಿದೆ. ಹೌದು, ಧಾರವಾಡ ವಿದ್ಯಾರ್ಜನೆಯ ಆಗರವಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ವಿಷಯಗಳ ತರಬೇತಿ ನೀಡುವ ಅದೆಷ್ಟೋ ಸಂಸ್ಥೆಗಳು ಧಾರವಾಡದಲ್ಲಿ ತಲೆ ಎತ್ತಿ ನಿಂತಿವೆ. ಎರಡು ತಿಂಗಳೋ, ಮೂರು ತಿಂಗಳೋ ಅಥವಾ ಆರು ತಿಂಗಳೋ ತರಬೇತಿ ಮುಗಿಸಿ ಹೊರಬರುವ ವಿದ್ಯಾರ್ಥಿಗಳು ಓದಲು ಸೂಕ್ತ ಸ್ಥಳವಕಾಶ ಸಿಗದೇ ಒದ್ದಾಡುತ್ತಾರೆ. ಹೀಗೆ ಓದೋ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಅಂತಾ ಧಾರವಾಡದಲ್ಲಿ 24/7 ಲೈಬ್ರರಿಗಳು ಪ್ರಾರಂಭವಾಗಿವೆ. ಈ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯದ ಆವರಣ, ಪಾರ್ಕ, ಪ್ರಶಾಂತ ವಾತಾವರಣವಿರುವ ಪ್ರದೇಶ ಹುಡುಕಿಕೊಂಡು ಓದಲು ಹೋಗುತ್ತಿದ್ದ ಯುವಕ ಯುವತಿಯರಿಗೆ ಇಂದು ಈ ಲೈಬ್ರಿಗಳು ಸಹಾಯವಾಗಿವೆ.ಇನ್ನು ಈ ಗ್ರಂಥಾಲಯಗಳ ಕುರಿತು ಓದಲು ಬಂದವರು ಮತ್ತು ಓದುತ್ತಿರುವವರು ಹೇಳಿರುವುದು ಏನು ಅಂತಾ ನೀವೆ ಕೇಳಿ..