ಜರ್ಮನಿಯಲ್ಲಿ ಕೊರೊನಾ ಸ್ಫೋಟ: 24 ಗಂಟೆಗಳಲ್ಲಿ 50 ಸಾವಿರ ಜನರಿಗೆ ಸೋಂಕು ದೃಢ

ಜರ್ಮನಿಯಲ್ಲಿ ಕೊರೊನಾ ಸ್ಫೋಟ: 24 ಗಂಟೆಗಳಲ್ಲಿ 50 ಸಾವಿರ ಜನರಿಗೆ ಸೋಂಕು ದೃಢ

ಬರ್ಲಿನ್: ಕೊರೊನಾ ಆತಂಕ ಇಳಿಕೆಯಾಗುತ್ತಿದೆ ಎಂದು ವಿಶ್ವದ ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ ಜರ್ಮನಿಯಲ್ಲಿ ಕೇವಲ 24 ಗಂಟೆಗಳಲ್ಲಿ 50 ಸಾವಿರ ಜನರಿಗೆ ಸೋಂಕು ದೃಢಪಟ್ಟಿದ್ದು, ಮತ್ತೆ ಆತಂಕ ಸೃಷ್ಟಿಸಿದೆ. ಹೌದು. ಕಳೆದ ಗುರುವಾರ (ನ.11ರಂದು) ಒಂದೇ ದಿನದಲ್ಲಿ 50 ಸಾವಿರ ಜನರಲ್ಲಿ ಸೋಂಕು ಕಂಡು ಬಂದಿದೆ. ಕೇವಲ 8 ಕೋಟಿ ಜನಸಂಖ್ಯೆ ಹೊಂದಿರುವ ಜರ್ಮನಿಯಲ್ಲಿ ಈಗಾಗಲೇ ಸುಮಾರು 50 ಲಕ್ಷ ಕೊರೊನಾ ಸೋಂಕು ಕಂಡು ಬಂದಿದೆ. ಈವರೆಗೂ 1 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ಎಲ್ಲೂ ಕೂಡ ಸಾವಿನ ಪ್ರಮಾಣವನ್ನು ಸಂಪೂರ್ಣವಾಗಿ ಬಹಿರಂಗ ಮಾಡಿಲ್ಲ ಎನ್ನಲಾಗುತ್ತಿದೆ. ಜರ್ಮನಿ ಜನಸಂಖ್ಯೆ ಕಡಿಮೆ ಇದ್ದರೂ.. ವ್ಯಾಕ್ಸಿನೇಷನ್​ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಇಲ್ಲಿಯವರೆಗೆ ಕೇವಲ ಶೇ.69 ಎಲಿಜಿಬಲ್​​ ಜನರಿಗೆ ಒಂದು ಡೋಸ್ ವ್ಯಾಕ್ಸಿನ್ ನೀಡಲಾಗಿದೆ.