ಆರ್ಸಿಬಿ vs ಮುಂಬೈ ಇಂಡಿಯನ್ಸ್ ನಡುವೆ ಸಮರ - ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಆರ್‌ಸಿಬಿ

ಮುಂಬೈ : ಆರ್ಸಿಬಿ ಇಂದು ಮುಂಬೈ ಇಂಡಿಯನ್ಸ್ ಜೊತೆಗೆ ಸೆಣಸಾಡುತ್ತಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಆರ್ಸಿಬಿ ಪಂದ್ಯವನ್ನು ಎದುರಿಸುತ್ತಿದೆ. ಇಂದಿನ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.
ಆರ್ಸಿಬಿಗೆ ಇಂದು ಆರನೇ ಪಂದ್ಯವಾಗಿದೆ. ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ 4 ಪಂದ್ಯ ಸೋತಿದ್ದು, ಒಂದು ಪಂದ್ಯ ಗೆದ್ದಿದೆ. ಮತ್ತೊಂದು ಬೇಸರದ ಸಂಗತಿ ಎಂದರೆ ಪಾಯಿಂಟ್ ಟೇಬಲ್ನಲ್ಲೂ ಆರ್ಸಿಬಿ 9ನೇ ಸ್ಥಾನದಲ್ಲಿದೆ. ಹಾಗಾಗಿ ಫ್ಯಾನ್ಸ್ಗೂ ಕೊಂಚ ಬೇಸರವಿದೆ. ಇದರ ನಡುವೆ ಇಂದಿನ ಪಂದ್ಯದಲ್ಲಾದರೂ ಆರ್ಸಿಬಿ ಗೆಲುವು ಸಾಧಿಸಲಿದ್ದಾರೆ ಎಂದುಕೊಂಡಿದ್ದಾರೆ.
ಆರ್ಸಿಬಿ ಮುಂಬೈ ನೆಲದಲ್ಲಿ ಇಂದು ಜಯ ಸಾಧಿಸಬೇಕು ಎಂಬುದು ಬಹುತೇಕ ಅಭಿಮಾನಿಗಳ ಕನಸು. ಇನ್ನು, ಟಾಸ್ ಗೆದ್ದ ಮುಂಬೈ ಪಡೆ ಪಿಲ್ಡಿಂಗ್ ಆಯ್ದುಕೊಂಡಿದೆ.