ಬೆಂಗಳೂರು; ಹೋಟೆಲ್ ಮಾಲಿಕರಿಂದ ಗ್ರಾಹಕರಿಗೆ ಶಾಕ್..! ದುಬಾರಿ ದುನಿಯಾದಲ್ಲಿ‌ ಬದುಕೋದೆ ಕಷ್ಟ..!

ಬೆಂಗಳೂರು; ಹೋಟೆಲ್ ಮಾಲಿಕರಿಂದ ಗ್ರಾಹಕರಿಗೆ ಶಾಕ್..! ದುಬಾರಿ ದುನಿಯಾದಲ್ಲಿ‌ ಬದುಕೋದೆ ಕಷ್ಟ..!

ಬೆಂಗಳೂರು; ದಿನನಿತ್ಯ ಬಳಸುವ ವಸ್ತುಗಳ‌ ಮೇಲೆ ದರ ಹೆಚ್ಚಾಗಿರುವುದರಿಂದ ಹೊಟೇಲ್‌ ಮಾಲಿಕರು ಸಹ ಉಪಹಾರಗಳಲ್ಲಿ ಇವತ್ತಿನಿಂದಲೇ ದರ ಪರಿಷ್ಕರಣೆ ಮಾಡಲಿದ್ದಾರೆ. ಎಲ್‌ಪಿಜಿ ಸಿಲಿಂಡರ್ ದರ ಏರಿಕೆ,ಹಾಲು,‌ ಅಡುಗೆ ಎಣ್ಣೆ, ದರ ಹೆಚ್ಚಾಗಿರೋ ಹಿನ್ನಲೆ ನೇರವಾಗಿ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡಲಿದ್ದಾರೆ, ಎಲ್ಲಾ ಆಹಾರಗಳ ಮೇಲೆ 5 ರಿಂದ 10 ರೂಪಾಯಿ‌ ಹೆಚ್ಚಳಕ್ಕೆ ಮುಂದಾಗಿದ್ದಾರೆ ಹೊಟೇಲ್ ಮಾಲಿಕರು. ಯಾವ ತಿಂಡಿಗಳ ಬೆಲೆ ಎಷ್ಟು ಎಂಬುದನ್ನು ನೋಡುವುದಾದ್ರೆ ಕಾಫಿ‌ ದರ ಮೊದಲು 10 ರೂ, ಈಗ 12 ರಿಂದ 15 ರೂಗೆ ಏರಿಕೆ ವಡೆ ದರ ಮೊದಲು 20 ರೂ, ಈಗ 25 ರಿಂದ 30 ರೂಗೆ ಏರಿಕೆ ಎರಡು ಇಡ್ಲಿಯ ದರ 30 ರಿಂದ 35 ರೂ, ಈಗ‌ 40 ರೂಗೆ ಏರಿಕೆ. ದೋಸೆ ದರ 50 ರೂ ಇರೋದು 65 ರೂಗೆ ಏರಿಕೆ ಖಾರಬಾತು ದರ 25 ರೂಪಾಯಿಂದ 26-27 ಏರಿಕೆ. ರೈಸ್ ಬಾತ್ ದರ 40 ರೂಪಾಯಿ ರಿಂದ 42 ರೂ ಗೆ ಏರಿಕೆ ಸೌತ್ ಇಂಡಿಯಾ ಊಟ 100-115 ರಿಂದ 120-125 ಏರಿಕೆ. ನಾರ್ತ್ ಇಂಡಿಯಾ 190 ರಿಂದ 200-210 ರೂಪಾಯಿ ಏರಿಕೆ. ಇನ್ನೂ ಸ್ವೀಟ್ಸ್ ಲ್ಲೂ 2-3 ರೂಪಾಯಿ ಹೆಚ್ಚಾಗಲಿದೆ, ಹಲವಾರು ತಿನಿಸುಗಳ ಮೇಲೆ ಬೆಲೆ ಹೆಚ್ಚಾಗಿದ್ದು, ಇದೆಲ್ಲವೂ ಗ್ರಾಹಕರಿಗೆ ತಲೆಬಿಸಿಯಾದಂತಾಗಿದೆ.. ಒಟ್ನಲ್ಲಿ ದಿನ ನಿತ್ಯವೂ ಒಂದಾದರ ಮೇಲೆ ಮತ್ತೊಂದು ಅಗತ್ಯವಸ್ತುಗಳ‌ ಮೇಲೆ ದರ ಪರಿಷ್ಕರಣೆ ಮಾಡ್ತಿದ್ರೆ, ಸಾರ್ವಜನಿಕರ ಗತಿ ಅದೋಗತಿ ಆಗೋದ್ರಲ್ಲಿ ಎರಡುಮಾತಿಲ್ಲ.