ಖುಷ್ಬೂ ಅತ್ತೆಯಿಂದ ಆಶೀರ್ವಾದ ಪಡೆದ ನಮೋ : ಕನಸು ನನಸಾಗಿದೆ ಎಂದ ನಟಿ

ಖುಷ್ಬೂ ಅತ್ತೆಯಿಂದ ಆಶೀರ್ವಾದ ಪಡೆದ ನಮೋ : ಕನಸು ನನಸಾಗಿದೆ ಎಂದ ನಟಿ

ನಟನೆಯಿಂದ ದೂರ ಉಳಿದು ರಾಜಕೀಯದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ನಟಿ ಖುಷ್ಬು ಸುಂದರ್, ತನ್ನ ಅತ್ತೆಯ ಕನಸನ್ನು ನನಸು ನನಸಾಗಿರುವ ಬಗ್ಗೆ ಫೋಟೋಗಳನ್ನು ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. 

ಹೌದು ತಮಿಳುನಾಡಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಖೂಷ್ಬು ತನ್ನ ಅತ್ತೆಗೆ ಖುಷ್ಬೂ ಭೇಟಿ ಮಾಡಿಸುವ ಮೂಲಕ ತನ್ನ ಅತ್ತೆಯ ಕನಸನ್ನು ನನಸು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಖುಷ್ಬೂ ಜೊತೆಗೆ ಆಕೆಯ ಅತ್ತೆ ದೇವನೈ ಚಿದಂಬರಂ ಪಿಳ್ಳೈ ಕೂಡ ಮೋದಿಯನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅವರು ಖುಷ್ಬೂ ಅತ್ತೆಯ ಆಶೀರ್ವಾದ ಪಡೆದಿದ್ದಾರೆ. ಮೋದಿಯನ್ನು ನೋಡಿ ತುಂಬಾ ಸಂತೋಷವಾಯಿತು. ಈ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ಖುಷ್ಬೂ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಮೋದಿ ಅವರ ಅಭಿಮಾನಿಯಾಗಿರುವ ನನ್ನ ಅತ್ತೆ ಶ್ರೀಮತಿ ದೇವನೈ ಚಿದಂಬರಂ, ಅವರನ್ನು ಕರೆದು ಭೇಟಿ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ಇಷ್ಟು ಸಂತೋಷ ನೀಡಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಲು ಪದಗಳೇ ಸಾಲದು ಎಂದ್ರು. ಒಮ್ಮೆಯಾದರೂ ಮೋದಿಯನ್ನು ಖುದ್ದಾಗಿ ಭೇಟಿಯಾಗಬೇಕೆಂಬುದು ನಮ್ಮ ಅತ್ತೆಯ ಬಹುದಿನದ ಕನಸಾಗಿತ್ತು. ತನ್ನ ತಾಯಿಯೊಂದಿಗೆ ಮಾತನಾಡುವ ಮಗನಂತೆ ಮೋದಿ ಅವರು ನಮ್ಮ ಅತ್ತೆಯ ಬಳಿ ಮಾತಾಡಿದ್ರು. ನನ್ನ ಅತ್ತೆಯ ಆಶೀರ್ವಾದ ಪಡೆದರು. 

ಮೋದಿಜಿ ನಿಮಗೆ ನಾವು ಸದಾ ಋಣಿಯಾಗಿದ್ದೇವೆ” ಎಂದು ಖುಷ್ಬೂ ಬರೆದುಕೊಂಡಿದ್ದಾರೆ.