BREAKING: ಕಾಂಗ್ರೆಸ್ ಅಭ್ಯರ್ಥಿಗಳ 9ನೇ ಪಟ್ಟಿ ಪ್ರಕಟ-ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ ಕಣಕ್ಕೆ

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಒಂಬತ್ತನೇ ಪಟ್ಟಿಯನ್ನ ಶುಕ್ರವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕ ಮೂರು ಕ್ಷೇತ್ರ ಹಾಗೂ ರಾಜಸ್ಥಾನದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ.
ಬಳ್ಳಾರಿಯಿಂದ ಇ. ತುಕಾರಾಂ, ಚಾಮರಾಜನಗರದಿಂದ ಸುನೀಲ್ ಬೋಸ್, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ ಕಣದಲ್ಲಿದ್ದಾರೆ. ರಾಜಸ್ಥಾನದ ರಾಜ್ಸಮಂದ್ ಕ್ಷೇತ್ರದಿಂದ ಸುದರ್ಶನ್ ರಾವತ್ ಬದಲಿಗೆ ಡಾ. ದಾಮೋದರ್ ಗುರ್ಜರ್ ಮತ್ತು ಭಿಲ್ವಾರಾದಿಂದ ದಾಮೋದರ್ ಗುರ್ಜರ್ ಬದಲಿಗೆ ಡಾ.ಸಿ.ಪಿ ಜೋಶಿ ಅವರನ್ನ ಕಣಕ್ಕಿಳಿಸಿದೆ.