ತಾರಿಹಾಳದ ಬಳಿ ಪೊಲೀಸ್ ವಾಹನ ಅಪಘಾತ

ತಾರಿಹಾಳದ ಬಳಿ ಪೊಲೀಸ್ ವಾಹನ ಅಪಘಾತ

ಧಾರವಾಡ: ಪೊಲೀಸನೋರ್ವ ಪೆಟ್ರೋಲಿಂಗ್ ವಾಹನವನ್ನು ರಸ್ತೆ ಸೇಪ್ಟಿ ಬ್ಯಾರಿಯರ್‌ಗೆ ಡಿಕ್ಕಿಪಡಿಸಿರುವ ಘಟನೆ ತಾರಿಹಾಳದ ಬಳಿ ನಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಪೊಲೀಸ್‌ರನ್ನು ಸಶಸ್ತ್ರ ಮೀಸಲು ಪಡೆಯ ಮುತ್ತು ಮಾಗಿ ಎಂದು ಗುರುತಿಸಲಾಗಿದೆ. ಜೊತೆಗಿದ್ದ ಉದಯ ದೊಡ್ಡಮನಿ ಎಂಬುವವರಿಗೆ ಯಾವುದೇ ತರಹದ ಗಾಯಗಳಾಗಿಲ್ಲ. ವಾಹನದ ಮುಂಭಾಗ ಸಂಪೂರ್ಣ ಜಖ್ಖಂಗೊಂಡಿದೆ. ಗಾಯಗೊಂಡಿರುವ ಪೊಲೀಸರನ್ನು ಕಿಮ್ಸಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.