ವಿಜಯಪುರ: ಆಲಮಟ್ಟಿ ಜಲಾಶಯದಿಂದ 2.75 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ವಿಜಯಪುರ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳಿ ಸುರಿಯುತ್ತಿರುವ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ 2.75 ಲಕ್ಷ ಕ್ಯೂಸೆಕ್ ನೀರನ್ನ ಹೊರಬಿಡಲಾಗಿದೆ.
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ 26 ಗೇಟ್‌ಗಳನ್ನ 1.5 ಮೀಟರ್ ಎತ್ತರಿಸಿ ನದಿಗೆ ನೀರು ಹರಿಬಿಡಲಾಗಿದೆ.
ಸದ್ಯ ಜಲಾಶಯದ ಗರಿಷ್ಠ ನೀರಿನ ಮಟ್ಟ: 123.081 ಟಿಎಂಸಿ.
ಇಂದಿನ ನೀರಿನ ಮಟ್ಟ: 83.486 ಟಿಎಂಸಿ.
ಜಲಾಶಯದ ಒಟ್ಟು ಎತ್ತರ : 519.60 ಮೀ.
ಜಲಾಶಯದಲ್ಲಿನ ಇಂದಿನ ನೀರಿನ ಪ್ರಮಾಣ : 516.92 ಮೀ.
ಇಂದಿನ ನೀರಿನ ಒಳಹರಿವು : 2.04,098 ಕ್ಯೂಸೆಕ್.
ಇಂದಿನ ನೀರಿನ ಹೊರಹರಿವು : 2,66,586 ಕ್ಯೂಸೆಕ್ ನಷ್ಟಿದೆ ಎಂದು ಮಾಹಿತಿ ಲಭ್ಯ
ವಾಗಿದೆ.