ವಿಶ್ವದ 100 ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಭಾರತದ ಆರು ಕಾಲೇಜುಗಳಿಗೆ ಸ್ಥಾನ

ವಿಶ್ವದ 100 ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಭಾರತದ ಆರು ಕಾಲೇಜುಗಳಿಗೆ ಸ್ಥಾನ

ಫೈನಾನ್ಶಿಯಲ್ ಟೈಮ್ಸ್ ಮ್ಯಾಗ್ಜಿನ್ ಬಿಡುಗಡೆ ಮಾಡಿರುವ ವಿಶ್ವದ ಟಾಪ್ 100 ಬ್ಯುಸಿನೆಸ್ ಕಾಲೇಜುಗಳಲ್ಲಿ ಭಾರತದ ಆರು ಕಾಲೇಜುಗಳ ಹೆಸರು ಸೇರ್ಪಡೆಯಾಗಿದೆ. ಇದರಲ್ಲಿ ಬೆಂಗಳೂರಿನ ಐಐಎಂ ಕಾಲೇಜು ಕೂಡ ಒಂದು. ಈ ಪಟ್ಟಿಯಲ್ಲಿ ಸ್ವಿಝರ್‌ಲ್ಯಾಂಡ್‌ ವಿಶ್ವವಿದ್ಯಾಲಯವು ಮೊದಲ ರ್‍ಯಾಂಕ್ ತನ್ನದಾಗಿದಾಗಿಸಿಕೊಂಡಿದೆ. ಉಳಿದಂತೆ ಭಾರತದ ಅಹ್ಮದಾಬಾದ್ ಐಐಎಂ 26ನೇ ರ್‍ಯಾಂಕ್ ಪಡೆದಿದೆ. ಹಾಗೂ ಎಸ್.ಪಿ ಜೈನ್ ಕಾಲೇಜು 29ನೇ ರ್‍ಯಾಂಕ್, ಇಂದೋರ್‌ನ ಐಐಎಂ 79ನೇ ರ್‍ಯಾಂಕ್, ಲಖನೌ ಐಐಎಂ 79ನೇ ರ್‍ಯಾಂಕ್ ಮತ್ತು ಉದಯಪುರದ ಐಐಎಂ 82ನೇ ರ್‍ಯಾಂಕ್ ಪಡೆದುಕೊಂಡಿದೆ.