ಧಾರವಾಡ: ನಾಳೆ ಅವಳಿನಗರದ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಧಾರವಾಡ: ನಾಳೆ ಅವಳಿನಗರದ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಧಾರವಾಡ: ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಲಿತಪರ ಸಂಘಟನೆಗಳು ನಾಳೆ ಹುಬ್ಬಳ್ಳಿ, ಧಾರವಾಡ ಬಂದ್‌ಗೆ ಕರೆ ನೀಡಿವೆ. 

ನಾಳೆ ವ್ಯಾಪಾರ ವಹಿವಾಟು ಕೂಡ ಬಂದ್ ಆಗಲಿವೆ. ಬಸ್ ಸಂಚಾರ ಕೂಡ ಸ್ಥಗಿತಗೊಳ್ಳಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿರುವ ಶಾಲಾ, ಕಾಲೇಜುಗಳಿಗೆ ಮಾತ್ರ ಡಿಡಿಪಿಐ ಅವರು ರಜೆ ಘೋಷಣೆ ಮಾಡಿದ್ದು, ಈ ರಜೆ ಅವಧಿಯನ್ನು ಶನಿವಾರ ಸರಿದೂಗಿಸಲು ಡಿಡಿಪಿಐ ಅವರು ಸೂಚನೆ ನೀಡಿದ್ದಾರೆ