ಸಿಲಿಕಾನ್ ಸಿಟಿಯ ನೈಟ್ ಲೋಕ ಮತ್ತೆ ಝಗಮಗ

ಬೆಂಗಳೂರು: ನೈಟ್ ಲೈಫ್ ಮತ್ತೆ ಶುರು ಆಗಿದೆ. ಕೋವಿಡ್ ಕೇಸ್ ಕಡಿಮೆ ಆಗಿವೆ. ಇದರಿಂದ ಇಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಅದಕ್ಕೇನೆ ಇಲ್ಲಿ ಮತ್ತೆ ರಾತ್ರಿಗಳೆಲ್ಲ ರಂಗೇರುತ್ತಿವೆ. ಬೆಂಗಳೂರು ನೈಟ್ ಲೈಫ್ ಲೋಕವೇ ಬೇರೆ. ಪರ ರಾಜ್ಯದ ಯುವಕ-ಯುವತಿಯರು ಇಲ್ಲಿ ಝಗಮಗಿಸೋ ಜಗತ್ತಲ್ಲಿ ಕಳೆದೆ ಹೋಗ್ತಾರೆ. ಆದರೆ ಕೋವಿಡ್ ಕಾರಣದಿಂದಲೇ ಇಲ್ಲಿ ಎಲ್ಲವೂ ಬಂದ್ ಆಗಿದ್ದವು. ಈಗ ಸ್ಥಿತಿ ಬದಲಾಗುತ್ತಿದೆ.ಬೆಂಗಳೂರಿನ ನೈಟ್ ಲೈಫ್ ವಾಪಸ್ ಆಗಿದೆ.