ಬಿಜೆಪಿಗೆ ದೇಣಿಗೆ ನೀಡಿದ ಪ್ರಧಾನಿ ಮೋದಿ

ಬಿಜೆಪಿಗೆ ದೇಣಿಗೆ ನೀಡಿದ ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ 2,000 ರೂ.ದೇಣಿಗೆ ನೀಡಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ಅವರು,ವಿಕಸಿತ ಭಾರತ ನಿರ್ಮಾಣಕ್ಕಾಗಿ ಬಿಜೆಪಿಗೆ ದೇಣಿಗೆ ನೀಡುವ ಮುಖೇನ ಬಲ ತುಂಬಲು ಇಷ್ಟಪಡುತ್ತೇನೆ. ನಮೋ ಆ್ಯಪ್‌ ಬಳಸಿ ನೀವೂ ದೇಣಿಗೆ ನೀಡಿ ದೇಶ ಕಟ್ಟಲು ಸಹಕರಿಸಬೇಕೆಂದು ದೇಶದ ಪ್ರತಿಯೊಬ್ಬರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. 

ಲೋಕಸಭಾ ಚುನಾವಣೆಗೆ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಚುನಾವಣಾ ಬಾಂಡ್‌ಗೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ. ಇದೀಗ ಚುನಾವಣೆ ಖರ್ಚು ವೆಚ್ಚಕ್ಕೆ ಹಣ ಹೊಂದಿಸಲು ಬಿಜೆಪಿ ದೇಣಿಗೆ ಆರಂಭಿಸಿದೆ. ದೇಶ ಕಟ್ಟಲು ದೇಣಿಗೆ ಅನ್ನೋ ಸಂದೇಶದೊಂದಿಗೆ ಬಿಜೆಪಿ ಡೋನೇಶನ್ ಅಭಿಯಾನ ಆರಂಭಿಸಿದೆ. 

ಮಾರ್ಚ್ 1ರಂದು ಬಿಜೆಪಿ ದೇಶ ಕಟ್ಟಲು ದೇಣಿಗೆ ಅನ್ನೋ ಅಭಿಯಾನ ಆರಂಭಿಸಿದೆ. ಈ ಮೂಲಕ ದೇಶದ ಮೂಲ ಮೂಲೆಯಿಂದ ದೇಣಿಗೆ ಸಂಗ್ರಹಿಸಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಮಾರ್ಚ್ 1ರಂದು ಈ ಅಭಿಯಾನ ಆರಂಭಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 1,000 ರೂಪಾಯಿ ದೇಣಿಗೆ ನೀಡಿದ್ದರು. ಇದೀಗ ಮೋದಿ 2,000 ರೂಪಾಯಿ ದೇಣಿಗೆ ನೀಡಿದ್ದಾರೆ.