ಅಂಬಾನಿ ಪುತ್ರನ ವಿವಾಹಪೂರ್ವ ಸಮಾರಂಭಕ್ಕೆ ಪತ್ನಿಯೊಂದಿಗೆ ಬಂದ ಮಾರ್ಕ್ ಜುಕರ್‌ಬರ್ಗ್

ಅಂಬಾನಿ ಪುತ್ರನ ವಿವಾಹಪೂರ್ವ ಸಮಾರಂಭಕ್ಕೆ ಪತ್ನಿಯೊಂದಿಗೆ ಬಂದ ಮಾರ್ಕ್ ಜುಕರ್‌ಬರ್ಗ್

ಗುಜರಾತ್‌ : ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಗುರುವಾರ ಗುಜರಾತ್‌ನ ಜಾಮ್‌ನಗರಕ್ಕೆ ಆಗಮಿಸಿದ್ದಾರೆ. 

ಮಾರ್ಚ್ 1 ರಿಂದ 3 ರವರೆಗೆ ಜಾಮ್‌ನಗರದಲ್ಲಿ ವಿವಾಹ ಪೂರ್ವ ಮಹೋತ್ಸವ ನಡೆಯಲಿದೆ.ಮಾರ್ಕ್ ಜುಕರ್‌ಬರ್ಗ್ ಮತ್ತು ಪ್ರಿಸ್ಸಿಲ್ಲಾ ಚಾನ್ ಅವರಿಗೆ ಜಾಮ್‌ ನಗರದಲ್ಲಿ ಹಾರ ಹಾಕಿ ಜಾನಪದ ಸಂಗೀತದೊಂದಿಗೆ ಸ್ವಾಗತಿಸಲಾಗಿದೆ. 

ಇನ್ನು ತಾವು ಮದುವೆ ಆಗಮಿಸುವ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಕೊಟ್ಟ ಮಾರ್ಕ್‌ ಜುಕರ್‌ಬರ್ಗ್‌ ತನ್ನ ಪತ್ನಿ ಪ್ರಿಸ್ಸಿಲ್ಲಾ ಅವರೊಂದಿಗೆ ಬ್ಯ್ಲಾಕ್ ಬಟ್ಟೆ ಧರಿಸಿದ ಸುಂದರವಾದ ಫೋಟೋ ಹಂಚಿಕೊಂಡು "ಭಾರತೀಯ ವಿವಾಹವನ್ನು ಪ್ರೀತಿಸಿ ಅನಂತ್ ಮತ್ತು ರಾಧಿಕಾ ಅವರಿಗೆ ಅಭಿನಂದನೆಗಳು!" ಎಂದು ಶೀರ್ಷಿಕೆ ಬರೆದಿದ್ದಾರೆ.