ಸಿದ್ದರಾಮಯ್ಯಗೆ ಮುಡಾ ಸಂಕಷ್ಟ ಬೆನ್ನಲ್ಲೇ ಮಹತ್ವದ ಸಭೆ ನಡೆಸದ ಹಿಂದುಳಿದ ವರ್ಗಗಳ ನಾಯಕರು

ಬೆಂಗಳೂರು : ಸಿಎಂ ಸಿದ್ದರಾಮಯ್ಯಗೆ ಮುಡಾ ಪ್ರಕರಣದಲ್ಲಿ ಕಾನೂನು ಕುಣಿಕೆ ಬಿಗಿಯುತ್ತಿರೋದು ಒಂದುಕಡೆಯಾದ್ರೆ ಇನ್ನೊಂದು ಕಡೆ ವಿಪಕ್ಷಗಳು ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿವೆ ಇದ್ರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪರವಾಗಿ ಹಿಂದುಳಿದ ವರ್ಗಗಳ ನಾಯಕರು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.
ಹಿಂದುಳಿದ ವರ್ಗದ ನಾಯಕರು ಸಿದ್ದರಾಮಯ್ಯರನ್ನ ಷಡ್ಯಂತರದಿಂದ ಮುಗಿಸಲು ಹೊರಟಿದ್ದಾರೆ ಈ ಸಮಯದಲ್ಲಿ ಸಿದ್ದರಾಮಯ್ಯ ಬೆಂಬಲ್ಲಕ್ಕೆ ಇರಬೇಕು ಎಂದು ಮಹತ್ವದ ಸಭೆ ನಡೆಸಿದ್ದಾರೆ. ಮಾಜಿ ಸಚಿವ ಹೆಚ್ ಎಂ ರೇವಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಬೈರತಿ ಸುರೇಶ್, ಸಂತೋಷ್ ಲಾಡ್ ಸೇರಿದಂತೆ 10 ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಕುರುಬ ಸಮಾಜದ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ರು.
ಸಿಎಂ ಸಿದ್ದರಾಮಯ್ಯ ಯಾವುದೇ ಸಂದರ್ಭ ಬಂದ್ರು ರಾಜೀನಾಮೆ ನೀಡಬಾರದು, ಪಕ್ಷದ ಒಳಗೂ ಯಾರು ಏನೇ ಒತ್ತಡ ಹಾಕಿದ್ರು ಮಣಿಯಬಾರದು ,ಹಿಂದುಳಿದ ನಾಯಕ ಸಿದ್ದರಾಮಯ್ಯ ಶಕ್ತಿಯನ್ನ ಹೈಕಮಾಂಡ್ ಗಮನಕ್ಕೂ ತರೋಣ ಎಂಥದೇ ಪರಿಸ್ಥಿತಿ ಎದುರಾದ್ರು ನಾವು ಸಿದ್ದರಾಮಯ್ಯ ಪರವಾಗಿ ಇರೋಣ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಪರ ಹಿಂದುಳಿದ ವರ್ಗಗಳ ನಾಯಕರು ಬ್ಯಾಟಿಂಗ್ ಮಾಡಿದ್ದಾರೆ. ಅಲ್ದೇ ಇದೇ ಸೋಮವಾರ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆ ಸಹ ನಡೆಸಲಿರುವ ಹಿಂದುಳಿದ ವರ್ಗಗಳ ನಾಯಕರು ನಿರ್ಧರಿಸಿದ್ದಾರೆ.
ಈ ಸಭೆ ಮೂಲಕ ಕಾಂಗ್ರೆಸ್ ಒಳಗಡೆ ಸಿಎಂ ಸ್ಥಾನಕ್ಕೆ ಟವಲ್ ಹಾಕಿಕೊಂಡು ಕಾಯುತ್ತಿದ್ದವರಿಗೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಗೆ ಪರೋಕ್ಷವಾಗಿ ರಾಜಕೀಯ ಸಂದೇಶ ರವಾನೆ ಮಾಡಿದ್ದಾರೆ.