ಕನ್ನಡ ನಾಮಫಲಕಗಳು 60-40 ರ ಅನುಪಾತದಲ್ಲಿರಬೇಕು

ಕನ್ನಡ ನಾಮಫಲಕಗಳು 60-40 ರ ಅನುಪಾತದಲ್ಲಿರಬೇಕು

ಕನ್ನಡ ನಾಮಫಲಕಗಳು ಹೇಗಿರಬೇಕು? ಅನ್ನೋ ಗೊಂದಲಕ್ಕೆ ಇದೀಗ ಸರ್ಕಾರ ತೆರೆ ಎಳೆದಿದೆ. ಈ ಮೊದಲು 2018 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಹೊರಡಿಸಿದ್ದ ಸುತ್ತೋಲೆಯಂತೆಯೇ ಇದೀಗ ಪ್ರತಿಯೊಂದು ನಾಮಫಲಕಗಳು ಶೇ.60 ರಷ್ಟು ಕನ್ನಡ ಇನ್ನುಳಿದ ಶೇ.40 ರಷ್ಟು ಬೇರೆ ಯಾವುದೇ ಭಾಷೆಯಲ್ಲಿರಬಹುದು ಎಂದಾಗಿದೆ. 
ಈ ಕುರಿತು ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದು ಹೀಗೆ. 

ಹೌದು. 2022ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಜಾರಿಗೆ ತರಲಾಯಿತು.‌ ಇದರ ಪ್ರಕಾರ ವಾಣಿಜ್ಯ ಸಂಕೀರ್ಣಗಳು, ಹೋಟೆಲ್, ಸಿನಿಮಾ ಮಂದಿರ, ಕೈಗಾರಿಕೆಗಳು ಸೇರಿದಂತೆ ಮುಂತಾದ ಕಟ್ಟಡಗಳ ಮೇಲೆ ಹಾಕುವ ನಾಮಫಲಕಗಳು ಶೇ.50 ಕನ್ನಡ ಹಾಗೂ ಶೇ.50 ಇನ್ನುಳಿದ ಭಾಷೆಯಿಂದ ಕೂಡಿರಬೇಕೆಂದಿದೆ. ಆದರೆ, ಇದನ್ನು ಬದಲಿಸಿ ಇನ್ನು ಮುಂದೆ ಈ ಮೊದಲಿನಂತೆ‌ಯೇ ಅರವತ್ತು ನಲವತ್ತರ ಅನುಪಾತದಲ್ಲೇ ಬೋರ್ಡ್ ಗಳು ಇರಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಲಾಗಿದೆ ಅಂತಾ‌ ಸಿಎಂ ಇದೇ ವೇಳೆ ಸ್ಪಷ್ಟಪಡಿಸಿದರು. ಅಂದರೆ, ಇನ್ನು ಮುಂದೆ ಅರವತ್ತು ನಲವತ್ತರ ಅನುಪಾತದಲ್ಲೇ ನಾಮಫಲಕಗಳು ಇರಬೇಕೆಂದಾಗಿದ್ದು, ಇದರಲ್ಲಿ ಯಾವುದೇ ಗೊಂದಲ ಬೇಡ.