I.N.D.I.A' ಮೈತ್ರಿಕೂಟಕ್ಕೆ ಗುಡ್ ಬೈ - ನಾಳೆ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ.!

'I.N.D.I.A' ಮೈತ್ರಿಕೂಟಕ್ಕೆ ಗುಡ್ ಬೈ - ನಾಳೆ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ.!
ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟದಿಂದ ಹೊರನಡೆಯುವ ಸಾಧ್ಯತೆಯಿರುವುದರಿಂದ ಲೋಕಸಭಾ ಚುನಾವಣೆಗಾಗಿ ಹುಟ್ಟಿಹಾಕಿದ್ದ ನೂತನ ಮೈತ್ರಿಕೂಟದಲ್ಲಿ ಒಡಕು ಮೂಡುವ ಲಕ್ಷಣ ಕಂಡುಬರುತ್ತಿದೆ. ನಿತೀಶ್ ಕುಮಾರ್ ಕೊನೆಯ ಕ್ಷಣದ ಯು-ಟರ್ನ್ ತೆಗೆದುಕೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪಾಲುದಾರರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಆರ್‌ಜೆಡಿ ಮತ್ತು ಜೆಡಿಯು ನಡುವಿನ ಬಿರುಕು ಹೆಚ್ಚಾಗಿದೆ. ನಿತೀಶ್ ಕುಮಾರ್ ಮತ್ತೆ ಪಕ್ಷಾಂತರ ಮಾಡಬಹುದು. ಅವರು ಮೈತ್ರಿಯನ್ನು ಮುರಿದು ಮತ್ತೆ ಬಿಜೆಪಿಗೆ ಸೇರಬಹುದು ಎಂಬ ಊಹಾಪೋಹಗಳಿವೆ.
ಈ ಹಾದಿಯಲ್ಲಿ ನಿತೀಶ್ ಕುಮಾರ್ ಅವರು ತಮ್ಮ ಎಲ್ಲಾ ಶಾಸಕರಿಗೆ ಪಾಟ್ನಾಗೆ ಬುಲಾವ್ ನೀಡಿದ್ದಾರೆ. ಅವರು ಮೊದಲು ರಾಜೀನಾಮೆ ನೀಡಿ ನಂತರ ಬಿಜೆಪಿಯ ಜಿತನ್ ರಾಮ್ ಮಾಂಝಿ ಮತ್ತು ಇತರರ ಸಹಾಯದಿಂದ ಹಕ್ಕು ಚಲಾಯಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಹೊಸ ಕ್ಯಾಬಿನೆಟ್ ರಚನೆಯಾದ ನಂತರ, ಅವರು ಈಗಿನ ಸದನವನ್ನು ವಿಸರ್ಜಿಸಲು ಶಿಫಾರಸು ಮಾಡಿ ಹೊಸ ಜನಾದೇಶವನ್ನು ಕೋರುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗಿದೆ.
ನಿತೀಶ್ ಕುಮಾರ್ ಅವರಿಗೆ ಇದು ಮೈತ್ರಿಕೂಟ ಗಳ ನಡುವಿನ ಐದನೇ ಬದಲಾವಣೆ. ರಾಜ್ಯದಲ್ಲಿ ಅಧಿಕಾರದಲ್ಲಿಟ್ಟುಕೊಂಡೇ 2013 ರಿಂದ, ಅವರು ಎನ್ಡಿಎ ಮತ್ತು ಮಹಾಘಟಬಂಧನ್ ನಡುವೆ ಅತಿಥಿಯ ಪಾತ್ರ ನಿರ್ವಹಿಸುತ್ತಿದ್ದಾರೆ. 2022 ರಲ್ಲಿ ಅವರು ಎನ್ ಡಿ ಎ ಮೈತ್ರಿಕೂಟದಿಂದ ಹೊರಬಂದರು.