ವಿಧಾನಸಭೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ರುದ್ರಪ್ಪ ಲಮಾಣಿ ಕುರಿತು ಡಿಕೆಶಿ ಹೇಳಿದ್ದು

ಬೆಂಗಳೂರು : ಇಂದು ನಾವೆಲ್ಲರೂ ಒಮ್ಮತದಿಂದ ರುದ್ರಪ್ಪ ಮಾಲಪ್ಪ ಲಮಾಣಿ ಅವರನ್ನು ವಿಧಾನಸಭೆಯ 25ನೇ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. 1999ರಲ್ಲಿ ನನ್ನ ಜೊತೆ ವಿಧಾನಸಭೆ ಪ್ರವೇಶಿಸಿದ ಲಮಾಣಿ ಅವರು ಸದಾ ಹಸನ್ಮುಖಿ. ರಾಜಕಾರಣಿಗೆ ಇದು ಬಹಳ ಅಗತ್ಯ. ಅವರು ಸಚಿವರಾಗಿ, ಪಕ್ಷದಲ್ಲಿ ಅನೇಕ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದವರಾಗಿದ್ದು, ರುದ್ರಪ್ಪ ಲಮಾಣಿ ಅವರನ್ನು ಅಜಾತ ಶತ್ರುವೆಂದೇ ಹಲವರು ಕರೆಯುವುದುಂಟು
ಹೀಗಂತ ಡಿಸಿಎಂ ಡಿಕೆಶಿ ಅವರು ಬಣ್ಣಿಸಿದ್ದಾರೆ.
ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳು ನಿಮ್ಮ ಬಳಿ ಬರಬೇಕಾಗುತ್ತೆ. ಇಂಥ ಸಂದರ್ಭದಲ್ಲಿ ನೀವು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ. ಹೀಗಾಗಿ ನಿಮಗೆ ವಿರೋಧ ಪಕ್ಷದ ನಾಯಕರ ಪಕ್ಕದಲ್ಲಿ ಸ್ಥಾನ ನೀಡಲಾಗಿರುತ್ತದೆ. ಇದೊಂದು ನ್ಯಾಯ ನೀಡುವ ಸ್ಥಾನ. ಈ ಸ್ಥಾನದಲ್ಲಿ ಕೂತು ಎಲ್ಲರಿಗೂ ನ್ಯಾಯ ಒದಗಿಸಬೇಕು.
ನೂತನ ಶಾಸಕರಿಗೆ ಅವಕಾಶ ನೀಡಿ ನಾಯಕತ್ವ ರೂಪಿಸಿ. ಆಮೂಲಕ ಎಲ್ಲರ ಹೃದಯ ಗೆಲ್ಲಬೇಕು ಅಂತಾ ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರು ಲಮಾಣಿಯವರಿಗೆ ಶುಭ ಕೋರಿದರು. ಜೊತೆಗೆ ಈ ಹಿಂದೆ ಸಚಿವರಾಗಿದ್ದವರು ಈಗ ವಿಧಾನಸಭೆ ಉಪಾಧ್ಯಕ್ಷರಾಗಿರುವುದಕ್ಕೆ ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಮುಂದೆ ಬಹಳಷ್ಟು ಅವಕಾಶ ಸಿಗಲಿದೆ ಎಂದೂ ಡಿಕೆಶಿ ಕಿವಿ ಮಾತು ಹೇಳಿದರು.