ಬೆಂಗಳೂರು : ನಂದಿನಿ ದೋಸೆ ಹಿಟ್ಟು ಬಿಡುಗಡೆ ಮಾಡಿದ ಸಿಎಂ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿನಿ ವತಿಯಿಂದ ಪ್ರಥಮಬಾರಿಗೆ ಗ್ರಾಹಕರಿಗೆ ಒದಗಿಸಲು ತಯಾರಿಸಿರುವ ನಂದಿನಿ ವೇ ಪ್ರೋಟೀನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಿದ್ದಾರೆ.. ಹಿಂದೆ ಸಾಕಷ್ಟು ಚರ್ಚೆಗೆ ಈ ಹಿಟ್ಟಿನ ವಿಚಾರ ಗ್ರಾಸವಾಗಿತ್ತು..
ಕೆಎಂಎಫ್ ಎಂಡಿ ಆಗಿದ್ದ ಜಗದೀಶ್ ವರ್ಗಾವಣೆಯ ಹೊತ್ತಲ್ಲಿ ಸಾಕಷ್ಟು ಟೀಕೆಗೆ ಗ್ರಾಸ ಆಗಿತ್ತು. ಕೊನೆಗೂ ಈಗ ವಿವಾದಗಳ ಬಳಿಕ ಕೆಎಂಎಫ್ ಮಾರುಕಟ್ಟೆಗೆ ಹಿಟ್ಟನ್ನು ಪರಿಚಯಿಸಿದೆ. ಸಚಿವರಾದ ವೆಂಕಟೇಶ್, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಕೆ.ಎಂ.ಎಫ್. ಅಧ್ಯಕ್ಷ ಭಿಮಾನಯಕ್, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.