Zomato ಸಹ ಸಂಸ್ಥಾಪಕ ಗೌರವ್ ಗುಪ್ತಾ ರಾಜೀನಾಮೆ: ಬರಲಿದೆಯಾ ಜೊಮ್ಯಾಟೋ ಮಾದರಿ ಹೊಸ ಆ್ಯಪ್?

ಮುಂಬೈ: ದೇಶದ ಫುಡ್ ಡೆಲಿವರಿ ದೈತ್ಯ ಜೊಮ್ಯಾಟೋದ ಸಹ-ಸಂಸ್ಥಾಪಕ ಗೌರವ್ ಗುಪ್ತಾ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ತಾನೇ ಕಟ್ಟಿ ಬೆಳೆಸಿ ದೈತ್ಯವಾಗಿ ಹಬ್ಬಿಸಿದ್ದ ಸಂಸ್ಥೆಯನ್ನು ತೊರೆದು ಹೊರ ನಡೆದಿದ್ದಾರೆ.
2015 ರಿಂದಲೂ ಜೊಮ್ಯಾಟೋದಲ್ಲಿದ್ದ ಗುಪ್ತಾ, ಕಳೆದ ಮೂರು ವರ್ಷಗಳಿಂದ ಕಂಪನಿಯ ಸಿಒಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊಮ್ಯಾಟೋ ಪ್ರೋ ಹಾಗೂ ಜೊಮ್ಯಾಟೋ ನ್ಯೂಟ್ರೀಷನ್ ಉದ್ಯಮ ಆರಂಭಿಸುವುದರಲ್ಲಿ ಗುಪ್ತಾ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಏತನ್ಮಧ್ಯೆ ಆನ್‌ಲೈನ್ ಮೂಲಕ ದಿನಸಿ ಡೆಲಿವರಿ ಮಾಡುತ್ತಿದ್ದ ಜೊಮ್ಯಾಟೋ ಅದನ್ನೂ ಸ್ಥಗಿತಗೊಳಿಸುವುದಾಗಿ ಹೇಳಿದೆ. ಸೆಪ್ಟೆಂಬರ್ 17 ರ ಬಳಿಕ ಆನ್‌ಲೈನ್ ಗ್ರೋಸರಿ ಡೆಲಿವರಿ ಇರುವುದಿಲ್ಲ ಎಂದು ಜೊಮ್ಯಾಟೋ ಹೇಳಿಕೊಂಡಿದೆ. ಈಗಾಗಲೇ ಗ್ರೋಫರ್ಸ್‌ನಲ್ಲಿ ಹೂಡಿಕೆ ಮಾಡಿದ್ದು, ಅದರ ಮೂಲಕವೇ ದಿನಸಿ ಡೆಲಿವರಿಗೆ ಜೊಮ್ಯಾಟೋ ಮುಂದಾಗಿದೆ.