ಕುಂದಾಪುರ : ರಾಷ್ಟ್ರೀಯ ಅಂಧರ ಚೆಸ್‌ನಲ್ಲಿ 8ನೇ ಬಾರಿಗೆ ಚಾಂಪಿಯನ್ ಆದ ಕಿಶನ್ ಗಂಗೊಳ್ಳಿ

ಕುಂದಾಪುರ : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 17ನೇ ರಾಷ್ಟ್ರೀಯ ಅಂಧರ ಚೆಸ್ ಚಾಂಪಿಯನ್ಶಿಪ್ನಲ್ಲಿ ಕುಂದಾಪುರ ಮೂಲದ ಪ್ರಸ್ತುತ ಶಿವಮೊಗ್ಗದಲ್ಲಿರುವ ಕಿಶನ್ ಗಂಗೊಳ್ಳಿ 8ನೇ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಬೆಂಗಳೂರಿನ ಆರ್ಯನ್ ಫೌಂಡೇಶನ್‌ನಲ್ಲಿ ಅಖಿಲ ಭಾರತೀಯ ಅಂಧರ ಚೆಸ್ ಫೆಡರೇಶನ್ (ಎಐಸಿಎಫ್ಬಿ) ವತಿಯಿಂದ ನಡೆದ ಈ ಚಾಂಪಿಯನ್ಶಿಪ್ನಲ್ಲಿ ದೇಶದ 40 ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಹಾಲಿ ಚಾಂಪಿಯನ್ ಕಿಶನ್ ಗಂಗೊಳ್ಳಿ 2,032 ಅಂಕ ಪಡೆಯುವ ಮೂಲಕ ಮತ್ತೆ ಅಗ್ರಸ್ಥಾನಿಯಾಗಿ ಮೂಡಿಬಂದರು. ತಮಿಳುನಾಡಿನ ಸಾಯಿಕೃಷ್ಣ ಎನ್.ಟಿ. 1,734 ಅಂಕ ಹಾಗೂ ಒಡಿಶಾದ ಪಾತ್ರ ಸುಬೆಂದು ಕುಮಾರ್ 1,732 ಅಂಕ ಪಡೆದು 2ನೇ ಹಾಗೂ 3ನೇ ಸ್ಥಾನಿಯಾದರು.
ಇದು ಅಂತಾರಾಷ್ಟ್ರೀಯ ಅಂಧರ ಚೆಸ್ ಟೂರ್ನಿಗಳಿಗೆ ಭಾರತೀಯರ ಆಯ್ಕೆಗೆ ಇರುವ ಪ್ರಮುಖ ಪಂದ್ಯಾವಳಿಯಾಗಿದೆ. ಇಲ್ಲಿ ಉತ್ತಮ ಆಟವಾಡಿದ ಕಿಶನ್ ಗಂಗೊಳ್ಳಿ ಸೇರಿದಂತೆ 12 ಮಂದಿ ಕ್ರೀಡಾಳುಗಳು ಮುಂದಿನ ವರ್ಷ ಗೋವಾದಲ್ಲಿ ನಡೆಯಲಿರುವ ಅಂಧರ ಅಂತಾರಾಷ್ಟ್ರೀಯ ಚೆಸ್ ಫೆಸ್ಟಿವಲ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.