ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ: ಬೆಚ್ಚಿಬಿದ್ದ ಜನ

ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ: ಬೆಚ್ಚಿಬಿದ್ದ ಜನ

ಕಲಬುರಗಿ: ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಿಗ್ಗೆ ಸುಮಾರು 6 ಗಂಟೆ ಸುಮಾರಿಗೆ ಚಿಂಚೋಳಿ ತಾಲೂಕಿನ ಹಲಚೇರಾ, ರಾಜಾಪುರ, ಗಡಿಕೇಶ್ವರ್, ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಭೂಕಂಪದ ಅನುಭ ಆಗಿದೆ. ಕಳೆದ ಶನಿವಾರ ಕೂಡ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಹಾಗೂ ಯರಕೊಂಡ ಗ್ರಾಮಗಳಲ್ಲಿ ನಸುಕಿನ ಜಾವ 5.40ರ ಸಮಯದಲ್ಲಿ ಎರಡು ಬಾರಿ ಲಘು ಭೂಕಂಪನ ಅನುಭವ ಆಗಿದ್ದು, ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿತ್ತು. ಅಲ್ಲದೇ ಜನರು ಆತಂಕದಿಂದ ಮನೆಯಿಂದ ಹೊರಬಂದಿದ್ದರು.