BREAKING : ಡಿಸಿಎಂ ಡಿಕೆಶಿಗೆ ಹೈಕೋರ್ಟ್‌ನಿಂದ ಬಿಗ್‌ ಶಾಕ್!

BREAKING : ಡಿಸಿಎಂ ಡಿಕೆಶಿಗೆ ಹೈಕೋರ್ಟ್‌ನಿಂದ ಬಿಗ್‌ ಶಾಕ್!

ಬೆಂಗಳೂರು : ಆದಾಯ ಮೀರಿ ಆಸ್ತಿ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ್ದ ಕೇಸ್‌ನ್ನು ವಜಾಗೊಳಿಸುವಂತೆ ಕೋರಿ ಡಿಸಿಎಂ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್‌ ವಜಾಗೊಳಿಸಿದೆ. 

ಅಷ್ಟೇ ಅಲ್ಲದೇ ಈ ಪ್ರಕರಣದಲ್ಲಿ ತಾನು ನೀಡಿದ್ದ, ತಡೆಯಾಜ್ಞೆಯನ್ನು ತೆರುವುಗೊಳಿಸಿ 3 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಸಿಬಿಐಗೆ ಸೂಚನೆ ನೀಡಿದೆ. 

ತನಿಖೆ ಬಹುತೇಕ ಅಂತಿಮ ಹಂತದಲ್ಲಿರುವದರಿಂದ ಕೇಸ್ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ತಿಳಿಸಿದೆ.. ಈ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಬಿಗ್‌ ಶಾಕ್‌ ನೀಡಿದೆ.