ಆರ್‌ಸಿಬಿಗೆ ಆಘಾತ : ಗುಜರಾತ್ ಎದುರು ಸೋಲು

ಆರ್‌ಸಿಬಿಗೆ ಆಘಾತ : ಗುಜರಾತ್ ಎದುರು ಸೋಲು

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ 2026ರ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡ ಬೌಲಿಂಗ್ ಮಾಡಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 155 ರನ್‌ಗಳಿಗೆ ಸರ್ವಪತನ ಕಂಡಿತು ಈ ಸಾಧಾರಣ ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡ 16 ಓವರ್‌ಗಳಲ್ಲಿ 156 ರನ್‌ ಗಳಿಸಿ ಸುಲಭ ಜಯ ಸಾಧಿಸಿದೆ.