ನವೆಂಬರ್ 1ರಂದು ಭಾರತದ ಅತಿ ದೊಡ್ಡ ಐಷಾರಾಮಿ ಮಾಲ್ 'ಜಿಯೋ ವರ್ಲ್ಡ್ ಪ್ಲಾಜಾ' ಉದ್ಘಾಟನೆ

ಭಾರತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನ್ ಅವರ ರಿಲಯನ್ಸ್ ಇಂಡಸ್ಟ್ರೀಸ್ ನವೆಂಬರ್ 1ರಂದು ಭಾರತದ ಅತಿದೊಡ್ಡ ಐಷಾರಾಮಿ ಮಾಲ್ ಆಗಿರುವ 'ಜಿಯೋ ವರ್ಲ್ಡ್ ಪ್ಲಾಜಾ'ವನ್ನು ಉದ್ಘಾಟಿಸಲು ಸಜ್ಜಾಗಿದೆ.
ಜಿಯೋ ವರ್ಲ್ಡ್ ಪ್ಲಾಜಾ ದೇಶದಲ್ಲಿ ಐಷಾರಾಮಿ ಶಾಪಿಂಗ್ ಅನುಭವವನ್ನು ನೀಡಲು ಸಜ್ಜಾಗಿದೆ. ಮುಕೇಶ್ ಅಂಬಾನಿಯವರ ಕನಸಿನ ಯೋಜನೆ ಎಂದು ಹಲವರು ಪರಿಗಣಿಸಿರುವ ಜಿಯೋ ವರ್ಲ್ಡ್ ಪ್ಲಾಜಾ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಿರ್ಮಾಣಗೊಂಡಿದೆ.
ವರದಿಗಳ ಪ್ರಕಾರ, ಐಷಾರಾಮಿ ಮಾಲ್ ಕಾರ್ಟಿಯರ್, ಬಲ್ಗರಿ, ಲೂಯಿಸ್ ವಿಟಾನ್, ಡಿಯರ್, ಗುಸ್ಸಿ, IWC ಸ್ಕಾಫ್‌ಹೌಸೆನ್ ಮತ್ತು ಲಗೇಜ್ ತಯಾರಕ ರಿಮೋವಾ ಸೇರಿದಂತೆ ಹಲವಾರು ಜನಪ್ರಿಯ ಬ್ರಾಂಡ್‌ಗಳ ಶೋರೂಮ್‌ಗಳನ್ನು ಹೊಂದಿರುತ್ತದೆ. ರಿಯಲ್ ಎಸ್ಟೇಟ್ ಸಲಹೆಗಾರರಾದ ನೈಟ್ ಫ್ರಾಂಕ್ ಪ್ರಕಾರ, ಭಾರತವು 2026ರ ವೇಳೆಗೆ 1.4 ಮಿಲಿಯನ್ ಮಿಲಿಯನೇರ್‌ಗಳನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ.
ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ ಒಡೆತನದ ಲೂಯಿ ವಿಟಾನ್, ಮುಖೇಶ್ ಅಂಬಾನಿ ಅವರ ಮೆಗಾ ಮಾಲ್‌ನಲ್ಲಿ ತನ್ನ ಮಳಿಗೆಯನ್ನು ತೆರೆಯಲು ಸಿದ್ಧವಾಗಿದೆ. ವರದಿಗಳ ಪ್ರಕಾರ, LVMH ತಿಂಗಳಿಗೆ 40 ಲಕ್ಷ ರೂಪಾಯಿ ಬಾಡಿಗೆಯನ್ನು ಪಾವತಿಸಲಿದೆ. ಜಿಯೋ ವರ್ಲ್ಡ್ ಪ್ಲಾಜಾ ಇಲ್ಲಿಯವರೆಗೆ ಭಾರತದ ಅತಿದೊಡ್ಡ LVMH ಸ್ಟೋರ್ ಅನ್ನು ಹೊಂದಿರುತ್ತದೆ.
ಇದಲ್ಲದೆ, ಐಷಾರಾಮಿ ಬ್ರಾಂಡ್ ಡಿಯೊರ್ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಒಂದು ಮಳಿಗೆಯನ್ನು ಬಾಡಿಗೆಗೆ ತೆಗೆದುಕೊಂಡಿದೆ ಮತ್ತು ಇದು ತಿಂಗಳಿಗೆ 21 ಲಕ್ಷ ರೂಪಾಯಿಗಳನ್ನು ಬಾಡಿಗೆಗೆ ಪಾವತಿಸಲಿದೆ ಎಂದು ವರದಿಯಾಗಿದೆ. 1.39 ಕೋಟಿ ರೂಪಾಯಿ ಭದ್ರತಾ ಠೇವಣಿಯನ್ನೂ ಪಾವತಿಸಲು ಕಂಪನಿ ಸಜ್ಜಾಗಿದೆ. ಭಾರತದ ಅತ್ಯಂತ ದುಬಾರಿ ಮಾಲ್ ಆಗಲಿರುವ ಜಿಯೋ ವರ್ಲ್ಡ್ ಪ್ಲಾಜಾ ವೈಯಕ್ತಿಕ ಶಾಪರ್‌ಗಳು, ವಿಐಪಿ ಕನ್ಸೈರ್ಜ್, ವೆಡ್ಡಿಂಗ್ ಕನ್ಸೈರ್ಜ್ ಮತ್ತು ಪೋರ್ಟರ್ ಸೇವೆಯಂತಹ ವಿಭಿನ್ನ ಸೇವೆಗಳನ್ನು ನೀಡುತ್ತದೆ.