ಬೆಂಗಳೂರು: ಜನವರಿ 22 ಕ್ಕೆ ಕರ್ನಾಟಕ ಬಂದ್: ಸಾ.ರಾ ಗೋವಿಂದು ಏನಂತಾರೆ ?

ಬೆಂಗಳೂರು: ಜನವರಿ 22 ಕ್ಕೆ ಕರ್ನಾಟಕ ಬಂದ್: ಸಾ.ರಾ ಗೋವಿಂದು ಏನಂತಾರೆ ?

ಬೆಂಗಳೂರು:ಕರ್ನಾಟಕ ಬಂದ್ ಕರೆ ನೀಡಿದ್ದ ಕನ್ನಡ ಸಂಘಟನೆಗಳು ನಿನ್ನೆ ಈ ಬಂದ್ ಕರೆ ವಾಪಸ್ ಪಡೆದಿವೆ. ಆದರೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿಯೇ ಇಂದು ಬೆಂಗಳೂರಿನ ಟೌನ್ ಹಾಲ್‌ ನಿಂದ ಎಂಇಎಸ್ ನಿಷೇಧಕ್ಕೆ ರ‍್ಯಾಲಿ ಆರಂಭಿಸಲಾಗಿದೆ.ಈ ಮೂಲಕ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ತರೋದಾಗಿಯೆ ಕನ್ನಡ ಹೋರಾಟಗಾರ ಮತ್ತು ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು ಹೇಳಿದ್ದಾರೆ. 

 

ನಿನ್ನೆಯ ದಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಒಂದು ಗಂಟೆ ಚರ್ಚೆ ಮಾಡಿದ್ದೇವೆ.ಎಂಇಎಸ್ ಬ್ಯಾನ್ ಮಾಡಲು ಅವರು ಕಾಲಾವಕಾಶ ಕೇಳಿದ್ದಾರೆ. ನಾವು ನಿಮ್ಮ ಜೊತೆಗೆ ಇರುತ್ತೇವೆ ಅಂತಲೂ ಹೇಳಿದ್ದಾರೆ. ಅವರ ಈ ಮಾತನ್ನ ನಾವು ಗೌರವಿಸಿದ್ದೇವೆ ಎಂದು ಸಾ.ರಾ.ಗೋವಿಂದು ತಿಳಿಸಿದ್ದಾರೆ. 

 

ಎಂಇಎಸ್ ನಿಷೇಧ ಆಗುವವರೆಗೂ ನಮ್ಮ ಹೋರಾಟ ನಿರಂತರವಾಗಿಯೇ ಇರುತ್ತದೆ. ಜನವರಿ-22 ರಂದು ಬಂದ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಸಭೆ ಮಾಡುತ್ತೇವೆ. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡೇ ಬಂದ್ ಮಾಡುತ್ತೇವೆ ಅಂತಲೇ ಸಾ.ರಾ.ಗೋವಿಂದು ಹೇಳಿದ್ದಾರೆ.